ಗೋಧಿ ರಪ್ತಿನ ಮೇಲೆ ಭಾರತದ ನಿಷೇಧದಿಂದಾಗಿ ಜಾಗತಿಕವಾಗಿ ಗೋಧಿ ಬೆಲೆಯಲ್ಲಿ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ಗೋಧಿ ರಪ್ತಿನ ಮೇಲೆ ನಿಷೇಧ ಹೇರಿರುವುದರಿಂದ ಜಾಗತಿಕವಾಗಿ ಗೋಧಿಬೆಲೆಯು 6% ದಷ್ಟು ಹೆಚ್ಚಾಗಿದೆ.
ವಿಶ್ವದ ಗೋಧಿ ರಪ್ತಿನಲ್ಲಿ 5ಪ್ರತಿಶತದಷ್ಟು ಭಾರತದ ಪಾಲಿದ್ದು ರಷ್ಯಾ ಮತ್ತು ಉಕ್ರೇನ್‌ ಸಂಘರ್ಷದಿಂದಾಗಿ ಗೋಧಿ ಬೆಲೆಯು ಗಗನಕ್ಕೇರಿತ್ತು. ಪ್ರಸ್ತುತ ಗೋಧಿ ರಪ್ತಿನ ಮೇಲೆ ಭಾರತದ ಅನಿರೀಕ್ಷಿತ ನಿಷೇಧವು ಮತ್ತಷ್ಟು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕುರಿತು ಜಿ-7 ರಾಷ್ಟ್ರಗಳು ಭಾರತದ ನಿಷೇಧವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿವೆ.

ಆದರೆ ಭಾರತವು ತನ್ನ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು “ಆಂತರಿಕ ಮೂಲಭೂತ ವಸ್ತಗಳ ಬೆಲೆ ಏರಿಕೆಗೆ ಈ ಕ್ರಮ” ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಸೋಮವಾರ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಬೆಲೆಯು ಏರಿಕೆಯಾದರೆ ಭಾರತದಲ್ಲಿ ಸ್ಥಳೀಯವಾಗಿ 4-8% ದಷ್ಟು ಬೆಲೆ ಕುಸಿತವಾಗಿದೆ. ಪ್ರಮುಖ ಗೋಧಿ ಬೆಳೆಗಾರರಾದ ರಾಜಸ್ಥಾನದಲ್ಲಿ ಕ್ವಿಂಟಲ್‌ಗೆ 200-250 ರೂ., ಪಂಜಾಬ್‌ನಲ್ಲಿ 100-150 ರೂ. ಮತ್ತು ಉತ್ತರ ಪ್ರದೇಶದಲ್ಲಿ ಕ್ವಿಂಟಲ್‌ಗೆ 100 ರೂ ಗಳಷ್ಟು ಕುಸಿದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!