4.4ಶೇಕಡಾಗೆ ಏರಿಕೆಯಾಗಿದೆ ಭಾರತದ ಚಾಲ್ತಿ ಖಾತೆ ಕೊರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಗುರುವಾರ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಹೆಚ್ಚುತ್ತಿರುವ ವ್ಯಾಪಾರದ ಅಂತರವು ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಚಾಲ್ತಿ ಖಾತೆ ಕೊರತೆಯನ್ನು GDP ಯ 4.4 ಶೇಕಡಾಕ್ಕೆ ಏರಿಕೆಯಾಗಿದೆ. ಭಾರತದ ಕರೆಂಟ್ ಅಕೌಂಟ್ ಬ್ಯಾಲೆನ್ಸ್ 2022-23 ಜುಲೈ-ಸೆಪ್ಟೆಂಬರ್‌ನಲ್ಲಿ 36.4 ಡಾಲರ್‌ ಶತಕೋಟಿ ಕೊರತೆಯನ್ನು ದಾಖಲಿಸಿದೆ, ಇದು ಹಣಕಾಸಿನ ಮೊದಲ ತ್ರೈಮಾಸಿಕದಲ್ಲಿ 18.2 ಶತಕೋಟಿ ಡಾಲರ್‌ (GDP ಯ 2.2%) ಗಳಷ್ಟಿತ್ತು.

“ಸರಕುಗಳ ವ್ಯಾಪಾರ ಕೊರತೆಯ ತೀವ್ರ ಹೆಚ್ಚಳದ ಹಿನ್ನೆಲೆಯಲ್ಲಿ ಭಾರತವು H1:2022-23 ರಲ್ಲಿ GDP ಯ 3.3 ಪ್ರತಿಶತದಷ್ಟು ಚಾಲ್ತಿ ಖಾತೆ ಕೊರತೆಯನ್ನು ದಾಖಲಿಸಿದೆ” ಎಂದು ಆರ್‌ಬಿಐ ಹೇಳಿದೆ. ಸಾಫ್ಟ್‌ವೇರ್, ವ್ಯಾಪಾರ ಮತ್ತು ಪ್ರಯಾಣ ಸೇವೆಗಳ ರಫ್ತು ಹೆಚ್ಚಳದ ಹಿನ್ನೆಲೆಯಲ್ಲಿ ಸೇವಾ ರಫ್ತುಗಳು ವರ್ಷದಿಂದ ವರ್ಷಕ್ಕೆ 30.2 ಶೇಕಡಾ ಬೆಳವಣಿಗೆಯನ್ನು ವರದಿ ಮಾಡಿದೆ.

ಏತನ್ಮಧ್ಯೆ, ಆರ್‌ಬಿಐನ ಆರ್ಥಿಕ ಸ್ಥಿರತೆಯ ವರದಿಯು ವಿದೇಶಿ ನೇರ ಹೂಡಿಕೆಯ ಸ್ಥಿರವಾದ ಒಳಹರಿವು ಮತ್ತು ಜುಲೈ 2022 ರಿಂದ ಬಂಡವಾಳ ಹರಿವಿನ ಪುನರಾರಂಭವು ಚಾಲ್ತಿಖಾತೆ ಕೊರತೆಗೆ ಆರಾಮವಾಗಿ ಹಣಕಾಸು ಒದಗಿಸಲಿದೆ ಎಂದು ಸೂಚಿಸುತ್ತದೆ. ಹೂಡಿಕೆಯ ಆದಾಯಯವು 12 ಶತಕೋಟಿ ಡಾಲರ್‌ ಏರಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!