ನನಸಾಗಲಿಲ್ಲ ಭಾರತದ ಗೆಲುವಿನ ಕನಸು: ಟೆಸ್ಟ್​ ಸರಣಿ ಡ್ರಾದಲ್ಲಿ ಅಂತ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇಂಗ್ಲೆಂಡ್​ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದ ಭಾರತಕ್ಕೆ ನಿರಾಸೆಯಾಗಿದೆ. ಕೊನೆಯ ಟೆಸ್ಟ್​ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬಳಗ ಸೋಲು ಕಾಣುವ ಮೂಲಕ ಐದು ಟೆಸ್ಟ್​ ಪಂದ್ಯಗಳ ಸರಣಿ 2-2 ಅಂತರದಲ್ಲಿ ಮುಕ್ತಾಯಗೊಂಡಿದೆ.
ಬರ್ಮಿಂಗ್​ಹ್ಯಾಮ್​​ನಲ್ಲಿ ನಡೆದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ 7 ವಿಕೆಟ್​​ಗಳ ಅಂತರದ ಗೆಲುವಿನ ನಗೆ ಬೀರಿದೆ. ಈ ಮೂಲಕ ಸರಣಿ ಸೋಲಿನಿಂದ ಪಾರಾಗಿದೆ.
ಇಂಗ್ಲೆಂಡ್​ ವಿರುದ್ಧ ಟಾಸ್​ ಸೋತು ಮೊದಲ ಇನ್ನಿಂಗ್ಸ್​​ನಲ್ಲಿ ಬ್ಯಾಟ್​ ಬೀಸಿದ್ದ ಟೀಂ ಇಂಡಿಯಾ 416ರನ್​ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ 284ರನ್​ಗಳಿಕೆ ಮಾಡಿತ್ತು. ಹೀಗಾಗಿ, ಟೀಂ ಇಂಡಿಯಾ 132ರನ್​ಗಳ ಮುನ್ನಡೆ ಪಡೆದುಕೊಂಡಿತ್ತು.
ಎರಡನೇ ಇನ್ನಿಂಗ್ಸ್​​ನಲ್ಲಿ ಸಂಪೂರ್ಣವಾಗಿ ತತ್ತರಿಸಿದ ಭಾರತ ತಂಡ 10ವಿಕೆಟ್​ ನಷ್ಟಕ್ಕೆ 245ರನ್​​ಗಳಿಕೆ ಮಾಡಿ, ಆಲೌಟ್​ ಆಯಿತು.
ಆತಿಥೆಯ ಇಂಗ್ಲೆಂಡ್​ ಗೆಲುವಿಗೆ ಟೀಂ ಇಂಡಿಯಾ 378ರನ್​ಗಳ ಗುರಿ ನೀಡಿತ್ತು. ಈ ರನ್​ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ರೂಟ್ ಹಾಗೂ ಬೈರ್​​ ಸ್ಟೋ ಉತ್ತಮ ಜೊತೆಯಾಟವಾಡಿ, ತಂಡವನ್ನ ಗೆಲುವಿನ ದಡ ಸೇರಿಸಿದರು. 270 ರನ್​​ಗಳ ಜೊತೆಯಾಟವಾಡಿ ತಂಡಕ್ಕೆ ಸುಲಭ ಗೆಲುವು ತಂದಿಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!