ಜಾಗತಿಕ ಆರ್ಥಿಕ ಕುಸಿತದ ನಡುವೆ 2023ರಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯಲಿದೆ: OECD ವರದಿ ತೆರೆದಿಟ್ಟಿರೋ ಅಂಶವಿದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಆರ್ಥಿಕ ಕುಸಿತದ ಭೀತಿಯ ನಡುವೆಯೇ 2023ನೇ ಆರ್ಥಿಕ ವರ್ಷದಲ್ಲಿ ಭಾರತವು ವೇಗವಾಗಿ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು
ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಪ್ರಕಟಿಸಿರೋ ವರದಿ ತಿಳಿಸಿದೆ.

ರಷ್ಯಾ ಉಕ್ರೇನ್‌ ಸಂಘರ್ಷದಿಂದಾಗಿ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಹಲವಾರು ದೇಶಗಳು ಆರ್ಥಿಕ ಕುಸಿತದ ಭೀತಿಯಲ್ಲಿವೆ. ಈ ಭೀತಿಗಳ ನಡುವೆಯೂ 6.6 ಶೇ ಅಭಿವೃದ್ಧಿ ದರದೊಂದಿಗೆ ಮುಂದುವರೆಯುತ್ತಿರುವ ಭಾರತವು 2023ರ ಹೊತ್ತಿಗೆ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ ರಫ್ತು ಮತ್ತು ದೇಶೀಯ ಬೇಡಿಕೆಯ ಬೆಳವಣಿಗೆ ಮಧ್ಯಮವಾಗಿರುವುದರಿಂದ FY 2023-24 ರಲ್ಲಿ ಭಾರತದ GDP ಬೆಳವಣಿಗೆಯು ಶೇಕಡಾ 5.7 ಕ್ಕೆ ನಿಧಾನವಾಗುತ್ತದೆ, ಆದರೆ ಇದು ಚೀನಾ ಮತ್ತು ಸೌದಿ ಅರೇಬಿಯಾ ಸೇರಿದಂತೆ ಇತರ G20 ಆರ್ಥಿಕತೆಗಳಿಗಿಂತ ಹೆಚ್ಚಿನ ಬೆಳವಣಿಗೆಯಾಗಿದೆ. ಪ್ರಸ್ತುತ 6.6 ಶೇ. ಇರುವ ಬೆಳವಣಿಗೆ ದರವು 2023ರಲ್ಲಿ 5.7ಕ್ಕೆ ಕುಸಿದು 2024-25ರ ಹೊತ್ತಿಗೆ 7 ಶೇಕಡಾಗೆ ತಲುಪಲಿದೆ ಎಂದು ವರದಿ ಉಲ್ಲೇಖಿಸಿದೆ.

ಅಮೆರಿಕ ಹಾಗೂ ಯುರೋಪ್‌ ನ ಆರ್ಥಿಕತೆ ಕುಸಿಯುತ್ತಿರುವುದರಿಂದ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಏಷ್ಯಾದ ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳ ಮೇಲೆ ಬಲವಾಗಿ ಅವಲಂಬಿತವಾಗಿದೆ, ಜಾಗತಿಕ ಜಿಡಿಪಿಯ ಮುಕ್ಕಾಲು ಭಾಗವನ್ನು ಈ ರಾಷ್ಟ್ರಗಳು ಆವರಿಸಿಕೊಳ್ಳಲಿವೆ ಎಂದು OECD ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!