ಶುಭಸುದ್ದಿ: ದೇಶದ ರಫ್ತು ಗಣನೀಯ ಪ್ರಮಾಣದಲ್ಲಿ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಇಡೀ ಜಗತ್ತು ಆರ್ಥಿಕ ಹಿಂಜರಿತದ ಪರಿಣಾಮಗಳಿಂದ ತತ್ತರಿಸುತ್ತಿದೆ. ಆದರೆ ಈ ನಡುವೆಯೇ ಭಾರತವು ರಫ್ತು ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಾಗಿದೆ. ಕಳೆದ ಏಪ್ರಿಲ್‌ ಮಾಸದಲ್ಲಿ ಭಾರತದ ರಫ್ತು ಪ್ರಮಾಣ ಶೇಕಡಾ 24.2 ರಷ್ಟು ಬೆಳವಣಿಗೆ ಕಂಡಿದೆ. ಡಾಲರ್‌ ರೂಪದಲ್ಲಿ ಲೆಕ್ಕಹಾಕುವುದಾದರೆ 38.2 ಶತಕೋಟಿ ಡಾಲರ್‌ ಮೊತ್ತದಷ್ಟು ಏರಿಕೆ ಕಂಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ವಿವರಿಸಲಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳು (ಶೇ. 113.2), ಎಲೆಕ್ಟ್ರಾನಿಕ್ ವಸ್ತುಗಳು (ಶೇ.64), ಮತ್ತು ರಾಸಾಯನಿಕ ವಸ್ತುಗಳ (ಶೇ 26.7) ರಫ್ತು ಪ್ರಮಾಣ ಏರಿಕೆ ದಾಖಲಿಸಿದೆ.
ಎಂಜಿನಿಯರಿಂಗ್ ಸರಕುಗಳು (ಶೇ 15.4), ಫಾರ್ಮಾಸ್ಯುಟಿಕಲ್ಸ್ (ಶೇ 3.9), ಮತ್ತು ಸಿದ್ಧ ಉಡುಪುಗಳು (ಶೇ. 16.4) ಬೆಳವಣಿಗೆ ದಾಖಲಿಸಿದೆ. ಮತ್ತೊಂದೆಡೆ, ರತ್ನಗಳು ಮತ್ತು ಆಭರಣಗಳ ರಫ್ತು (ಶೇ. 2.1) ಮತ್ತು ಅಕ್ಕಿ (ಶೇ. 14.2) ರಫ್ತು ಪ್ರಮಾಣ ಏಪ್ರಿಲ್‌ ನಲ್ಲಿ ಕೊಂಚ ಹಿನ್ನಡೆ ಕಂಡಿದೆ.
ತೀವ್ರಗತಿಯಲ್ಲಿ ಪಸರಿಸುತ್ತಿರುವ ಓಮಿಕ್ರಾನ್ ಚೀನಾವನ್ನು ಕಂಗಾಲಾಗಿಸಿದೆ. ಈ ಸಂಗತಿಯೂ ಭಾರತದ ರಫ್ತು ಪ್ರಮಾಣ ಹೆಚ್ಚಳಕ್ಕೆ ಪೂಕರವಾಗಿದೆ.
ಅಚ್ಚರಿಯ ವಿಚಾರವೆಂದರೆ ದೇಶದ ಚಿನ್ನದ ಆಮದು ಪ್ರಮಾಣ 1.7 ಶತಕೋಟಿ ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ ನಲ್ಲಿ ಅಮದು ಪ್ರಮಾಣ 6.23 ಶತಕೋಟಿ ಡಾಲರ್‌ ಗಳಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!