Monday, July 4, 2022

Latest Posts

ಕೊರೋನಾ ವಿರುದ್ಧ ಭಾರತದ ಹೋರಾಟ: IPL ಸಂಬಳದ ಒಂದು ಭಾಗ ದೇಣಿಗೆ ನೀಡುವೆ ಎಂದ ನಿಕೂಲಸ್ ಪೂರನ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವಿರುದ್ಧ ಭಾರತದ ಹೋರಾಟಕ್ಕೆ ಎಲ್ಲೆಡೆಯಿಂದ ಸಹಾಯ ಹರಿದು ಬರುತ್ತಿದ್ದು, ಇದರ ಮಧ್ಯೆ ಕೆಲ ಖ್ಯಾತ ಕ್ರಿಡಾಪಟುಗಳು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
ಈಗಾಗಲೇ ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​, ಬ್ರೆಟ್​ ಲೀ ಹಾಗೂ ಪ್ಯಾಟ್​ ಕಮ್ಮಿನ್ಸ್​ ಕೋವಿಡ್​ ಹೋರಾಟಕ್ಕೆ ಕೈ ಜೋಡಿಸಿ ಧನ ಸಹಾಯ ಮಾಡಿದ್ದಾರೆ. ಇದೀಗ ಕಿಂಗ್ಸ್ ಪಂಜಾಬ್​ ತಂಡದ ಬ್ಯಾಟ್ಸ್​ಮನ್​ ನಿಕೂಲಸ್ ಪೂರನ್ ಕೂಡ ದೇಣಿಗೆ ನೀಡಿದ್ದಾರೆ.
ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿನ ತಮ್ಮ ಸಂಬಳದ ಒಂದು ಭಾಗ ದೇಣಿಗೆ ನೀಡಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಜತೆಗೆ ಇತರರು ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿರುವ ಪೂರನ್​, ನಿಮ್ಮ ಕೈಯಿಂದ ಆಗುವ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಪೂರನ್​ಗೆ 4.2 ಕೋಟಿ ರೂ. ನೀಡಿ ಖರೀದಿ ಮಾಡಲಾಗಿದೆ.
ಇನ್ನು ಭಾರತದ ಹೋರಾಟದಲ್ಲಿ ಈಗಾಗಲೇ ಕೈ ಜೋಡಿಸಿರುವ ರಾಜಸ್ಥಾನ ರಾಯಲ್ಸ್​ 7.5 ಕೋಟಿ ರೂ ದೇಣಿಗೆ ನೀಡಲು ಮುಂದಾಗಿದ್ದು, ಡೆಲ್ಲಿ ಕ್ಯಾಪಿಟಲ್ ಕೂಡ ಸಹಾಯ ಮಾಡುವುದಾಗಿ ಹೇಳಿಕೊಂಡಿದೆ. ಇದೀಗ ಕಿಂಗ್ಸ್ ಪಂಜಾಬ್ ಕೂಡ ಕೋವಿಡ್ ಹೋರಾಟಕ್ಕಾಗಿ ಆಮ್ಲಜನಕ ಸಾಂದ್ರಕ ನೀಡುವುದಾಗಿ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss