Saturday, June 25, 2022

Latest Posts

ಕೊರೋನಾ ವಿರುದ್ಧ ಭಾರತದ ಹೋರಾಟ: ರಾಜಸ್ಥಾನ್ ರಾಯಲ್ಸ್ 7.5 ಕೋಟಿ ದೇಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದಲ್ಲಿ ಕೊರೋನಾ ರೋಗದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿಕೊಂಡಿರುವ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್, 7.5 ಕೋಟಿ ದೇಣಿಗೆಯನ್ನು ಘೋಷಿಸಿದೆ.
ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಕ್ಷಿಪ್ರ ಗತಿಯಲ್ಲಿ ವ್ಯಾಪಿಸಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ರೋಗಿಗಳಿಗೆ ಆಮ್ಲಜನಕದ ಪೂರೈಕೆ ಸೇರಿದಂತೆ ಚಿಕಿತ್ಸೆಯ ಮೂಲಸೌಕರ್ಯದ ಕೊರತೆ ಎದುರಾಗಿದೆ. ಈ ಸಮಯದಲ್ಲಿ ತಕ್ಷಣದ ನೆರವಿನ ಭಾಗವಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಮಾಲೀಕರು, ಆಟಗಾರರು ಹಾಗೂ ಮ್ಯಾನೇಜ್‌ಮೆಂಟ್‌ನಿಂದ 7.5 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸುತ್ತೇವೆ. ಇದನ್ನು ರಾಜಸ್ಥಾನ್ ರಾಯಲ್ಸ್ ಫೌಂಡೇಷನ್ ಹಾಗೂ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಖಾಂತರ ಜಾರಿಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಬ್ರಿಟಿಷ್ ಏಷ್ಯನ್ ಟ್ರಸ್ಟ್ ಭಾರತದಲ್ಲಿ ಕೌಶಲ್ಯ ಹಾಗೂ ಶಿಕ್ಷಣ ಕ್ಷೇತ್ರ ಸೇರಿದಂತೆ ಅನೇಕ ಉಪಕ್ರಮಗಳಲ್ಲಿ ಭಾರತೀಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.
ಟ್ರಸ್ಟ್‌ನ ಸಂಸ್ಥಾಪಕ ಪ್ರಿನ್ಸ್ ಚಾರ್ಲ್ಸ್, ಭಾರತಕ್ಕಾಗಿ ತುರ್ತು ಆಮ್ಲಜನಕ ಪೂರೈಸುವ ಮನವಿ ಮಾಡಿದ್ದರು. ಇದರಂತೆ ಭಾರತಕ್ಕೆ ಆಕ್ಸಿಜನ್ ಪೂರೈಸಲು ಅಭಿಯಾನ ಪ್ರಾರಂಭಿಸಿದೆ. ರಾಜಸ್ಥಾನ್ ರಾಯಲ್ಸ್ ನೀಡುವ ದೇಣಿಗೆ ಹಣವು ದೇಶೆದೆಲ್ಲೆಡೆ ನೆರವಾಗಲಿದೆ. ಆದರೂ ರಾಜಸ್ಥಾನದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss