ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಎಂಪಾಕ್ಸ್ (Mpox case) ವೈರಸ್ ಪತ್ತೆಯಾಗಿದ್ದು, ಇದು ಪ್ರಯಾಣ ಸಂಬಂಧಿತ ಸೋಂಕು ಎಂದು ಪರಿಶೀಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಆದಾಗ್ಯೂ, ಇದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಲ್ಲ ಎಂದು ಕೇಂದ್ರ ತಿಳಿಸಿದೆ.
ಆರೋಗ್ಯ ಸಚಿವಾಲಯವು, ಈ ಹಿಂದೆ ಶಂಕಿತ ಎಂಪಾಕ್ಸ್ (ಮಂಕಿಪಾಕ್ಸ್) ಪ್ರಕರಣವನ್ನು ಪ್ರಯಾಣ ಸಂಬಂಧಿತ ಸೋಂಕು ಎಂದು ಪರಿಶೀಲಿಸಲಾಗಿದೆ. ಪ್ರಯೋಗಾಲಯ ಪರೀಕ್ಷೆಯು ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲಾಡ್ 2 ರ ಎಂಪಾಕ್ಸ್ ವೈರಸ್ ಇರುವಿಕೆಯನ್ನು ದೃಢಪಡಿಸಿದೆ.ಈ ಪ್ರಕರಣವು ಜುಲೈ 2022 ರಿಂದ ಭಾರತದಲ್ಲಿ ವರದಿಯಾದ ಹಿಂದಿನ 30 ಪ್ರಕರಣಗಳಂತೆಯೇ ಪ್ರತ್ಯೇಕವಾದ ಪ್ರಕರಣವಾಗಿದೆ ಮತ್ತು ಪ್ರಸ್ತುತ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಭಾಗವಾಗಿಲ್ಲ ಎಂದು ಸಚಿವಾಲಯ ಹೇಳಿದೆ.
mpox ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿ ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ ಮತ್ತು ಯಾವುದೇ ಕೊಮೊರ್ಬಿಡಿಟಿಗಳನ್ನು ಎದುರಿಸುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ .
Mpox ವೈರಸ್ ಇರುವ ದೇಶದಿಂದ ಇತ್ತೀಚೆಗೆ ಪ್ರಯಾಣಿಸಿದ ಯುವಕನನ್ನು, ಪ್ರಸ್ತುತ ಪ್ರತ್ಯೇಕವಾಗಿ ಇರಿಸಿ ನಿಗಾವಹಿಸಲಾಗಿದ್ದು, ಆತನ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ಅನಾರೋಗ್ಯ ಅಥವಾ ಕೊಮೊರ್ಬಿಡಿಟಿಗಳಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.