Friday, July 1, 2022

Latest Posts

345 ರನ್‌ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾನ್ಪುರ ಟೆಸ್ಟ್‌ನ ಎರಡನೇ ದಿನದಂದು 345 ರನ್‌ಗಳಿಗೆ ಭಾರತದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದೆ.
ಟೀಂ ಇಂಡಿಯಾದ ಹೊಸ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ.
ಇಂದು ಟೀಂ ಇಂಡಿಯಾ 258/4 ಸ್ಕೋರ್‌ನೊಂದಿಗೆ ಆಟ ಆರಂಭಿಸಿತ್ತು. ಇಂದು ರವೀಂದ್ರ ಜಡೇಜಾ ಹಾಗೂ ಶ್ರೇಯಸ್ ಅಯ್ಯರ್ ಜೊತೆಯಾಟ ಆರಂಭಿಸಿದ್ದು, ಶ್ರೇಯಸ್ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.
ಜಡೇಜಾ 50 ರನ್ ಗಳಿಸಿದ್ದು, ಟಿಮ್ ಸೌಥಿ ಅವರನ್ನು ಬೋಲ್ಡ್ ಮಾಡಿದರು. ನಂತರವೂ ಶ್ರೇಯಸ್ ವೇಗದ ಗತಿಯಲ್ಲಿ ರನ್ ಕಲೆ ಹಾಕಿ, ಆಟ ಮುಂದುವರಿಸಿದರು.
ಊಟದ ಬ್ರೇಕ್‌ವರೆಗೆ 8 ವಿಕೆಟ್ ನಷ್ಟಕ್ಕೆ ಭಾರತ 332 ರನ್ ಗಳಿಸಿತ್ತು. ತದನಂತರ ಉಳಿದ ಎರಡು ವಿಕೆಟ್ ಕೂಡ ಕೇವಲ 13 ರನ್‌ನಲ್ಲೇ ಉರುಳಿವೆ. ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಭಾರತದ 4 ವಿಕೆಟ್‌ಗಳನ್ನು ಕಬಳಿಸಿದ ನ್ಯೂಜಿಲೆಂಡ್, ಎರಡನೇ ಸೆಷನ್‌ನ ಆರಂಭದಲ್ಲಿಯೇ ಉಳಿದ 2 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾದ ಇನ್ನಿಂಗ್ಸ್ ಅನ್ನು ಅಂತ್ಯಗೊಳಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss