ಇಂದು ಭಾರತದ ಮೊದಲ ಖಾಸಗಿ ರಾಕೆಟ್ ‘ವಿಕ್ರಮ್’ ಉಡಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಖಾಸಗಿ ಕಂಪನಿ ತಯಾರಿಸಿದ ರಾಕೆಟ್ ವಿಕ್ರಮ್ ಉಡಾವಣೆಗೆ ತಯಾರಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಬೆಳಗ್ಗೆ 11:30ಕ್ಕೆ ರಾಕೆಟ್ ಉಡಾವಣೆಯಾಗಲಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಇಸ್ರೋ ಸಂಸ್ಥಾಪಕ ವಿಕ್ರಮ್ ಸಾರಾಭಾಯಿ ಸ್ಮರಣಾರ್ಥ ಸ್ಕೈರೂಟ್ ಸಂಸ್ಥೆ ರಾಕೆಟ್‌ಗೆ ವಿಕ್ರಮ್ ಎಂದು ಹೆಸರಿಟ್ಟಿದೆ.

ವಿಕ್ರಮ್ ಸೀರಿಸ್‌ನಲ್ಲಿ ಒಟ್ಟಾರೆ ಮೂರು ರಾಕೆಟ್‌ಗಳಿವೆ. ವಿಕ್ರಮ್-ಎಸ್ ರಾಕೆಟ್ ಇದಾಗಿದ್ದು, ಮೂರು ಚಿಕ್ಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲಿದೆ. ವಿಕ್ರಮ್ ಮೂಲಕ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳ ಪ್ರವೇಶವಾಗಿದೆ.

ವಿಕ್ರಮ್-ಎಸ್ ರಾಕೆಟ್ ಏಕ ಹಂತದ ಉಪ ಕಕ್ಷೆಯ ಉಡಾವಣಾ ವಾಹನವಾಗಿದೆ. ಮೂರು ಗ್ರಾಹಕ ಪೇ ಲೋಡ್‌ಗಳನ್ನು ವಿಕ್ರಮ್ ಹೊತ್ತೊಯ್ಯಲಿದೆ. 2018ರಲ್ಲಿ ಸ್ಕೈರೂಟ್ ಸ್ಥಾಪನೆಯಾಗಿದ್ದು, ಸುಧಾರಿತ ಸಂಯೋಜನೆ ಹಾಗೂ ತ್ರೀಡಿ ಮುದ್ರಣ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್, ಹೈಪರ್ಗೋಲಿಕ್- ಲಿಕ್ವಿಡ್ ಮತ್ತು ಘನ ಇಂಧನ ಆಧಾರಿತ ರಾಕೆಟ್ ಇಂಜಿನ್‌ನ್ನು ಯಶಸ್ವಿಯಾಗಿ ತಯಾರಿಸಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!