Sunday, August 14, 2022

Latest Posts

ಕೊರೋನಾ ಲಸಿಕೆ ಜಗತ್ತಿಗೆ ಭಾರತದ ಗಿಫ್ಟ್: ಅಮೆರಿಕಾದ ವಿಜ್ಞಾನಿ ಪ್ರಶಂಸೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತವು ಕೊರೋನಾ ಲಸಿಕೆಯನ್ನು ಜಾಗತಿಕವಾಗಿ ಹಂಚುವ ಮೂಲಕ ಜಗತ್ತಿಗೆ ಗಿಫ್ಟ್ ನೀಡಿದೆ ಎಂದು ಅಮೆರಿಕಾದ ವಿಜ್ಞಾನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಮೆರಿಕಾ ಹ್ಯೂಸ್ಟನ್​ನ ನ್ಯಾಷನಲ್ ಸ್ಕೂಲ್ ಆಫ್ ಟ್ರೋಪಿಕಲ್ ಮೆಡಿಸಿನ್​ನ ಡೀನ್​ ಡಾ. ಪೀಟರ್ ಹೊಟೆಜ್ ವೆಬಿನಾರ್​ನಲ್ಲಿ ಈ ಕುರಿತು ಮಾತನಾಡಿದ್ದು, ಎರಡು mRNA ವ್ಯಾಕ್ಸಿನ್​ಗಳು ಬಹುಶಃ ಜಗತ್ತಿ ಬಡರಾಷ್ಟ್ರಗಳ ಮೇಲೆ ಪರಿಣಾಮ ಬೀರದೇ ಇರಬಹುದು. ಆದರೆ ಭಾರತದ ವ್ಯಾಕ್ಸಿನ್​ಗಳು ಜಗತ್ತನ್ನೇ ರಕ್ಷಿಸಿವೆ. ಭಾರತದ ಈ ಕೊಡುಗೆಯನ್ನು ಅಲ್ಲಗಳೆಯಬಾರದು ಎಂದಿದ್ದಾರೆ.
ನಾನು ವಾರಕ್ಕೊಮ್ಮೆ ಟೆಲಿಕಾನ್ಫರೆನ್ಸ್ ಮೂಲಕ ಭಾರತದ ಸಹೋದ್ಯೋಗಿಗಳ ಜೊತೆಗೆ ಮಾತನಾಡುತ್ತಿದ್ದೆ ಅಷ್ಟೇ, ಕೆಲವೇ ದಿನಗಳಲ್ಲಿ ಎಲ್ಲವೂ ಸಾಧ್ಯವಾಯಿತು. ಕೇವಲ ಸಾಧ್ಯವಾಗಿದ್ದಷ್ಟೇ ಅಲ್ಲ ಉತ್ತಮವಾಗಿ, ಸೃಜನ ಶೀಲತೆಯಿಂದ ಚೆನ್ನಾಗಿಯೇ ಆಯಿತು ಎಂದಿದ್ದಾರೆ.
ಕೊರೋನಾ ಸಮಯದಲ್ಲೇ ಭಾರತ ತನ್ನ ದೈತ್ಯ ಮತ್ತು ಆಳವಾದ ವೈದ್ಯಕೀಯ ಅನುಭವದೊಂದಿಗೆ ಜಗತ್ತಿನ ಔಷಧಾಲಯವೆಂಬಂತೆ ಕಾರ್ಯನಿರ್ವಹಿಸಿತ್ತು. ಭಾರತ ಜಗತ್ತಿನ ಅತಿದೊಡ್ಡ ಔಷಧಿಗಳ ತಯಾರಿಕೆಯನ್ನು ಮಾಡುತ್ತಿದ್ದು ಹಲವು ದೇಶಗಳು ಔಷಧಿಗಳಿಗಾಗಿ ಭಾರತದ ಮೊರೆ ಹೋಗಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss