ಮಡಗಾಸ್ಕರ್‌ ಗೆ ಭಾರತದ ಮಾನವೀಯ ನೆರವು : 5 ಸಾವಿರ ಟನ್‌ ಅಕ್ಕಿ ಪೂರೈಕೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಆಫ್ರಿಕಾದ ಮಡಗಾಸ್ಕರ್‌ ರಾಷ್ಟ್ರಕ್ಕೆ ಭಾರತವು ಮಾನವೀಯ ನೆರವು ನೀಡುವುದಾಗಿ ಘೋಷಿಸಿದ್ದು ನೆರವಿನ ಭಾಗವಾಗಿ 5,000 ಟನ್‌ ಅಕ್ಕಿಯನ್ನು ಪೂರೈಸುವುದಾಗಿ ಹೇಳಿದೆ.
ಈ ಕುರಿತು ಭಾರತದ ರಾಯಭಾರಿ ಅಭಯ್ ಕುಮಾರ್ ಅವರು ಮಡಗಾಸ್ಕರ್ ಪ್ರಧಾನಿ ಕ್ರಿಶ್ಚಿಯನ್ ಎನ್ಟ್ಸೆ ಅವರನ್ನು ಭೇಟಿ ಮಾಡಿ ಭಾರತದ ಮಾನವೀಯ ಸಹಾಯದ ಬಗ್ಗೆ ವಿವರಿಸಿದ್ದಾರೆ ಹಾಗೂ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಜುಲೈ ತಿಂಗಳಲ್ಲಿ ಈ ನೆರವು ಮಡಗಾಸ್ಕರನ್ನು ತಲುಪುವ ನಿರೀಕ್ಷೆಯಿದೆ.

ಈ ಹಿಂದೆಯೂ ಕೂಡ 2021ರಲ್ಲಿ ಬರಗಾಲ ಪೀಡಿತ ಜನರಿಗೆ 1,000 ಮೆಟ್ರಿಕ್‌ ಟನ್‌ ಅಕ್ಕಿ, ಪ್ರವಾಹ ಸಂತ್ರಸ್ತರಿಗೆ ಮಾರ್ಚ್ 2020 ರಲ್ಲಿ 600 ಟನ್ ಅಕ್ಕಿಯನ್ನು ನೆರವು ನೀಡಿತ್ತು.

ಇದು ಭಾರತದ ʼಸಾಗರ್‌ʼ (SAGAR- ಸಮುದ್ರ ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ನೀತಿಯ ಭಾಗವಾಗಿದೆ. ಭಾರತ-ನೇತೃತ್ವದ ವಿಪತ್ತು ನಿರೋಧಕ ಮೂಲಸೌಕರ್ಯ (CDRI) ಒಕ್ಕೂಟವನ್ನು ಸೇರಿಕೊಂಡ ಮಡಗಾಸ್ಕರ್‌ ದೇಶವು ಭಾರತವು ಹಿಂದೂ ಮಹಾಸಾಗರ ನಿಯೋಗದ ವೀಕ್ಷಕನಾಗಿ ಸೇರಿಕೊಳ್ಳುವುದು, ಜಿಬೌತಿ ನೀತಿ ಸಂಹಿತೆ ಸೇರಿದಂತೆ ಈ ಹಿಂದೆ ಹಲವು ವಿಷಯಗಳಲ್ಲಿ ಭಾರತದ ಪರವಾಗಿ ಬೆಂಬಲಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!