ಕಾಮನ್‌ವೆಲ್ತ್ ನಲ್ಲಿ ಭಾರತದ ಪದಕದ ಬೇಟೆ: ಬೆಳ್ಳಿಗೆ ಕೊರಳೊಡ್ಡಿದ ಪ್ರಿಯಾಂಕಾ ಗೋಸ್ವಾಮಿ, ಅವಿನಾಶ್ ಮುಕುಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಇಂದು ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ಮಹಿಳೆಯರ 10000 ಮೀಟರ್ ಓಟದ ನಡಿಗೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ 49 ನಿಮಿಷ 38 ಸೆಕೆಂಡುಗಳಲ್ಲಿ ಮ್ಯಾರಥಾನ್ ದೂರವನ್ನು ಕ್ರಮಿಸಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದ್ದಾರೆ .

ಟ್ರ್ಯಾಕ್​​ ಮತ್ತು ಫೀಲ್ಡ್​​ನಲ್ಲಿ ಮೊದಲ ಪದಕ ಗೆದ್ದಿರುವ ಭಾರತದ ಮಹಿಳಾ ಆಟಗಾರ್ತಿಯಾಗಿ ಪ್ರಿಯಾಂಕಾ ಹೊರಹೊಮ್ಮಿದ್ದಾರೆ. ಈಗಾಗಲೇ ಟ್ರ್ಯಾಕ್​ ಮತ್ತು ಫೀಲ್ಡ್​​ನಲ್ಲಿ ಭಾರತದ ಮುರುಳಿ ಶ್ರೀಶಂಕರ್​(ಲಾಂಗ್​ಜಂಪ್​), ತೇಜಸ್ವಿನ್ ಶಂಕರ್​(ಹೈಂಜಪ್​​) ಪದಕ ಗೆದ್ದಿದ್ದಾರೆ. ಆದರೆ, ಪ್ರಿಯಾಂಕಾ ಗೋಸ್ವಾಮಿ ಇದೀಗ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಪುರುಷರ 3 ಸಾವಿರ ಮೀಟರ್ ಸ್ಟೀಪಲ್​ ಚೇಸ್​ ಫೈನಲ್​ನಲ್ಲಿ ಭಾರತದ ಅವಿನಾಶ್ ಮುಕುಂದ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇತ್ತ ಬಾಕ್ಸಿಂಗ್ ಹಾಗೂ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಇನ್ನಷ್ಟು ಪದಕ ಬರುವುದು ಖಚಿತವಾಗಿದೆ. ಈಗಾಗಲೇ ಅಮಿತ್, ನೀತು​ ಫೈನಲ್​ಗೆ ಲಗ್ಗೆ ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!