Wednesday, August 17, 2022

Latest Posts

ಕೊರೋನಾಘಾತದ ನಡುವೆಯೂ ಉದ್ಯೋಗಸೃಷ್ಟಿಯಲ್ಲಿ ಭಾರತದ ಐಟಿ ಉದ್ಯಮ ಮುಂದು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಹೊಡೆತಕ್ಕೆ ಸಿಲುಕಿ ಉದ್ಯೋಗಾವಕಾಶಗಳೆಲ್ಲ ಸಾಯುತ್ತಿರುವ ಆತಂಕವಿರುವಾಗ, ಭಾರತದ ತಂತ್ರಜ್ಞಾನ ಉದ್ದಿಮೆ ಮಾತ್ರ ಅಪಾರ ಪ್ರಮಾಣದಲ್ಲಿ ಉದ್ಯೋಗಸೃಷ್ಟಿ ಮಾಡುತ್ತಿರುವುದು ಸಮಾಧಾನಕ್ಕೆ ಕಾರಣವಾಗಿದೆ.
ದೇಶದಲ್ಲಿನ ಉದ್ದಿಮೆಗಳು ಹೆಚ್ಚು ಡಿಜಿಟಲೀಕರಣಗೊಳ್ಳುತ್ತಿರುವ ಹಿನ್ನೆಲೆ ಸ್ಟಾರ್ಟ್ ಅಪ್ ಗಳು ಇತರೆ ಸಂಸ್ಥೆಗಳು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ನೂರಾರು ಉದ್ಯೋಗಗಳು ಸೃಷ್ಟಿಯಾಗುತ್ತಿವೆ.
ಈ ಬಗ್ಗೆ ವರದಿ ಮಾಡಿರುವ ಜ್ಸಿಫೆನೋ ಸಂಸ್ಥೆ, ಭಾರತದ ಐಟಿ ಸೇವಾ ಸಂಸ್ಥೆಗಳು, ಸ್ಟಾರ್ಟ್ ಅಪ್ ಗಳು ಆರು ಬಗೆಯ ಹುದ್ದೆಗಳಿಗೆ 70 ಸಾವಿರ ಜನರನ್ನು ನೇಮಿಸಿಕೊಳ್ಳಲಿದ್ದು, ವೇತನದಲ್ಲಿ ಶೇ.50-60ರಷ್ಟು ಬಡ್ತಿ ಸಂಬಳ ಹೆಚ್ಚಿಸುತ್ತಿವೆ ಎಂದು ಹೇಳಿದೆ. ಸ್ಟಾಕ್ ಡೆವಲಪರ್‌ಗಳು, ಡೇಟಾ ಎಂಜಿನಿಯರ್‌ಗಳು, ಸ್ಥಳೀಯ ಡೆವಲಪರ್‌ಗಳು, ಡೆವೊಪ್ಸ್, ಬ್ಯಾಕೆಂಡ್ ಎಂಜಿನಿಯರ್‌ಗಳು ಮತ್ತು ಯಂತ್ರ ಕಲಿಕೆ ಈ ಆರು ವಿಭಾಗಗಳಲ್ಲಿ ಅರ್ಹ ಉದ್ಯೋಗಿಗಳಿಗೆ ಭಾರಿ ಬೇಡಿಕೆ ಇದೆ. ಕಳೆದ ವರ್ಷ ಆಕ್ಸೆಂಚರ್ ಸಂಸ್ಥೆಯಲ್ಲಿ 3 ಸಾವಿರ ಓಪನಿಂಗ್ಸ್ ಇತ್ತು, ಬಳಿಕ ಇದನ್ನು ಏಪ್ರಿಲ್ ನಲ್ಲಿ 18 ಸಾವಿರಕ್ಕೆ ಏರಿಕೆ ಮಾಡಿದ್ದು, ಈಗ ಬರೋಬ್ಬರಿ 32 ಸಾವಿರ ಸ್ಥಾನಗಳಿಗೆ ಓಪನಿಂಗ್ಸ್ ಕೊಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!