ಆಸ್ಕರ್‌ ಅಂಗಳದಲ್ಲಿ ಭಾರತದ ‘ಲಾಪತಾ ಲೇಡಿಸ್’ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ.

ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

‘ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದೆ. ಈ ಸಿನಿಮಾದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ.

‘ಲಾಪತಾ ಲೇಡಿಸ್​’ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಚೆನ್ನೈನ್​ನಲ್ಲಿ ‘ಭಾರತ ಫಿಲ್ಮ್​ ಫೆಡರೇಷನ್’ ಸದಸ್ಯರು ಈ ಘೋಷಣೆ ಮಾಡಿದ್ದಾರೆ. ಈಗ ನಡೆಯಲಿರುವುದು 97ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಆಗಿದೆ.

‘ಲಾಪತಾ ಲೇಡಿಸ್’ ಸಿನಿಮಾ 2001ರಲ್ಲಿ ನಡೆಯುವ ಗ್ರಾಮೀಣ ಭಾರತದ ಕಥೆಯನ್ನು ಹೊಂದಿದೆ. ಎರಡು ನವ ವಿವಾಹಿತರ ಕಥೆಯನ್ನು ಹೊಂದಿದೆ. ರೈಲ್ವೆ ಪ್ರಯಾಣದಲ್ಲಿ ವಧುವಿಬ್ಬರೂ ಬದಲಾಗುತ್ತಾರೆ. ಆ ಬಳಿಕ ಅನೇಕರ ಕಣ್ಣು ತೆಗೆಸುವ ಕೆಲಸವನ್ನು ಮಾಡುತ್ತದೆ.

ಆಮಿರ್ ಖಾನ್ ಅವರು ‘ಲಾಪತಾ ಲೇಡಿಸ್’ ಚಿತ್ರ ನಿರ್ಮಾಣ ಮಾಡಿದ್ದಾರೆ. ‘ಲಾಪತಾ ಲೇಡಿಸ್’ ಈ ಮೊದಲು ಟೊರೆಂಟೋ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಸಾರ ಕಂಡಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!