Tuesday, August 16, 2022

Latest Posts

44 ದೇಶಗಳಲ್ಲಿ ಪತ್ತೆಯಾಗಿದೆ ಭಾರತದ ರೂಪಾಂತರಿ ಕೊರೋನಾ ವೈರಸ್: WHO

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತದಲ್ಲಿನ ಕೊರೋನಾ ರೂಪಾಂತರಿ ವೈರಸ್ ಹಲವು ದೇಶಗಳಲ್ಲಿ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ ಅಕ್ಟೋಬರ್‌ನಲ್ಲಿ ಪತ್ತೆಯಾದ ಕೋವಿಡ್-19 ಬಿ.1.617 ರೂಪಾಂತರಿ, ವಿಶ್ವದ ಸುಮಾರು 4,500 ಜನರಲ್ಲಿ ಕಂಡು ಬಂದಿದೆ ಎಂದು ಡಬ್ಲ್ಯುಹೆಚ್​ಒಗೆ ಒಳಪಡುವ 44 ದೇಶಗಳು ಓಪನ್ ಆಕ್ಸೆಸ್​ ಡೇಟಾ ಬೇಸ್​ನಲ್ಲಿ ಅಪ್ಲೋಡ್​ ಮಾಡಿದ ಮಾಹಿತಿಯಿಂದ ತಿಳಿದು ಬಂದಿದೆ.
ಇದರ ಜೊತೆಗೆ ಇನ್ನೂ ಐದು ದೇಶಗಳಲ್ಲಿ ರೂಪಾಂತರಿ ಪತ್ತೆಯಾದ ಬಗ್ಗೆ ಡಬ್ಲ್ಯುಹೆಚ್​ಒಗೆ ಮಾಹಿತಿ ಸಿಕ್ಕಿದ್ದು, ವಾರ ಕಳೆದಂತೆ ಈ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದೆ.
ಬ್ರಿಟನ್​ನಲ್ಲಿ ಈ ರೂಪಾಂತರಿ ವೈರಸ್ ಹೆಚ್ಚಾಗಿ ಕಂಡು ಬಂದಿದ್ದು, ಬಿ.1.617 ರೂಪಾಂತರಿ ವೈರಸ್ ಮೂರು ವಿಭಿನ್ನ ಉಪ-ವಂಶಾವಳಿಗಳಿಂದ ಸ್ವಲ್ಪ ಭಿನ್ನವಾದ ರೂಪಾಂತರಗಳು ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ ಎಂದು ಕಳೆದ ವಾರ ಡಬ್ಲ್ಯುಹೆಚ್​ಒ ಹೇಳಿತ್ತು.
ಈ ರೂಪಾಂತರಿ ವೈರಸ್ ಭಾರತದ ಹೊರಗೆ ಬ್ರಿಟನ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿದೆ. ರೂಪಾಂತರಿ ವೈರಸ್ ಮೂಲ ವೈರಸ್​ಗಿಂತ ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಅವುಗಳು ಹೆಚ್ಚು ಹರಡುತ್ತದೆ ಮತ್ತು ಲಸಿಕೆಯ ರಕ್ಷಣಾ ಗೋಡೆಯನ್ನೂ ದಾಟುವ ಸಾಮರ್ಥ್ಯ ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss