ಮೋದಿಗೆ ಮಾತ್ರ ಉಕ್ರೇನ್-ರಷ್ಯಾ ಯುದ್ಧ ತಡೆಯುವ ಸಾಮರ್ಥ್ಯ ಇದೆ: ಫ್ರೆಂಚ್ ಪತ್ರಕರ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಮತ್ತು ಉಕ್ರೇನ್ ನಡುವೆ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧವು ವಿಶ್ವದ ಹಲವು ದೇಶಗಳನ್ನು ಬಾಧಿಸುತ್ತಿದೆ. ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಇದು ಭಾರತದ ಪ್ರಧಾನಿಯಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಯುದ್ಧವನ್ನು ಅಂತ್ಯಗೊಳಿಸುವ ಸಾಮರ್ಥ್ಯ ಇದೆ ಎಂದು ಫ್ರೆಂಚ್ ಪತ್ರಕರ್ತೆ ಲಾರಾ ಹೈಮ್ ಹೇಳಿದ್ದಾರೆ.

ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಲಾರಾ ಹೈಮ್,  ಯುದ್ಧವನ್ನು ಅಂತ್ಯಗೊಳಿಸಲು ರಷ್ಯಾ ಮತ್ತು ಉಕ್ರೇನ್ ನಡುವಿನ ಮಾತುಕತೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಪಾತ್ರ ವಹಿಸಬಹುದು ಎಂದರು. ಪ್ರಸ್ತುತ ಸಮಯದಲ್ಲಿ ಮಾತುಕತೆಗಳು ಕಷ್ಟಕರವಾಗಿದೆ. ಉಕ್ರೇನ್ ಮಾತುಕತೆಗಳು ನಡೆಯಲು ಬಯಸುತ್ತಿಲ್ಲ ಮತ್ತು ರಷ್ಯಾದ ಅಧ್ಯಕ್ಷ ಪುಟಿನ್ ಅವರ ನಡವಳಿಕೆಯನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ಮೂಲಕ ಸ್ಪಷ್ಟಪಡಿಸಲು ಬಯಸುತ್ತದೆ. ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಅಮೆರಿಕದ ಗಣ್ಯರು ಮಾತನಾಡದಿರುವುದು ಆಶ್ಚರ್ಯಕರ ವಿಷಯವಾಗಿದೆ ಎಂದು ಅವರು ಹೇಳಿದರು. ಹೀಗೆ ಆದರೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ದೀರ್ಘಕಾಲದವರೆಗೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

ಉಕ್ರೇನ್‌ನಲ್ಲಿ ಅಂತಿಮವಾಗಿ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ರಷ್ಯಾ ಇನ್ನಷ್ಟು ಭಯೋತ್ಪಾದಕ ದಾಳಿಗಳನ್ನು ಮಾಡಬಹುದು ಎಂಬ ಕಳವಳ ವ್ಯಕ್ತಪಡಿಸಿದರು. ಉಕ್ರೇನ್ ನಾಗರಿಕರು ತುಂಬಾ ಧೈರ್ಯಶಾಲಿಗಳು ಎಂದು ಹೇಳಬೇಕು. ಪಾಶ್ಚಿಮಾತ್ಯ ದೇಶಗಳ ನೆರವು ಕೋರಿ ರಷ್ಯಾದೊಂದಿಗೆ ಹೋರಾಡುತ್ತಿದ್ದಾರೆ. ಉಕ್ರೇನ್ ಜನರಿಗೆ ಶಸ್ತ್ರಾಸ್ತ್ರ ಅವಶ್ಯಕತೆಯಿದ್ದು, ಅಮೆರಿಕ ಇನ್ನಷ್ಟು ನೆರವು ನೀಡಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!