ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. ವಿನೋದ್ ಕುಮಾರ್ ಭಾನುವಾರ ಕಂಚಿನ ಪದಕ ಗೆದ್ದಿದ್ದಾರೆ.
ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.98 ಮೀಟರ್ ಎಸೆತದು ಏಷ್ಯನ್ ದಾಖಲೆ ಬರೆದರು.
ವಿನೋದ್ ತನ್ನ ಆರು ಪ್ರಯತ್ನಗಳಲ್ಲಿ 17.46 ಮೀಟರ್ ಎಸೆತದಿಂದ ಆರಂಭಿಸಿದರು. ಇದರ ನಂತರ, ಅವರು 18.32 ಮೀಟರ್, 17.80 ಮೀಟರ್, 19.20 ಮೀಟರ್, 19.91 ಮೀಟರ್, 19.81 ಮೀಟರ್ ಎಸೆದರು. ಅವರ ಐದನೇ ಎಸೆತವನ್ನು 19.91 ಮೀಟರ್ಗಳ ಅತ್ಯುತ್ತಮ ಎಸೆತವೆಂದು ಪರಿಗಣಿಸಲಾಗಿದೆ. ಈ ಅಂತರದಿಂದ ವಿನೋದ್ ಕುಮಾರ್ ಏಷ್ಯನ್ ದಾಖಲೆ ಬರೆದರು.