ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿಎಸ್)ಮತ್ತು ಬಯೋಟೆಕ್ ಸಂಸ್ಥೆ ಮೈನ್ವ್ಯಾಕ್ಸ್ನ ವಿಜ್ಞಾನಿಗಳು
ಅಭಿವೃದ್ಧಿಪಡಿಸಿರುವ ‘ವಾಮ್ ’ಲಸಿಕೆಯು ಈಗ ಇರುವ ಎಲ್ಲ ಸಾರ್ಸ್-ಕೋವ್-2 ವೈರಾಣುಗಳನ್ನೂ ನಿಷ್ಕ್ರಿಯಗೊಳಿಸಿ ದೇಹದಲ್ಲಿ ಪ್ರತಿಕಾಯಗಳನ್ನು ಸದೃಢಗೊಳಿಸುವ ಸಾಮರ್ಥ್ಯ ಹೊಂದಿರುವುದಾಗಿ ಆಸ್ಟ್ರೇಲಿಯಾದ ಸಿಎಸ್ಐಆರ್ಒ ಕೈಗೊಂಡ ಸ್ವತಂತ್ರ ಮೌಲ್ಯಮಾಪನದಿಂದ ವ್ಯಕ್ತವಾಗಿದೆ. ಇದರಿಂದಾಗಿ ಭಾರತ ಕೊರೋನಾ ವಿರುದ್ಧದ ಹೋರಾಟದಲ್ಲಿ ಇನ್ನೊಂದು ಮಹತ್ವದ ಲಸಿಕೆಯನ್ನು ಸಿದ್ಧಗೊಳಿಸುವ ದಿನಗಳು ಸಮೀಪಿಸಿವೆ.
ಈ ಏಜೆನ್ಸಿಯು ಕಳೆದ ವರ್ಷ ಆಕ್ಸ್ಫರ್ಡ್-ಕೋವಿಶೀಲ್ಡ್ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ ಯಶಸ್ವೀ ಫಲಿತಾಂಶವನ್ನು ತೋರಿಸಿತ್ತು.ಇದೀಗ ‘ವಾರ್ಮ್ ’ ಲಸಿಕೆಯ ಬಗ್ಗೆ ಐಐಎಸ್ಸಿಯ ಪ್ರೊ.ರಾಘವನ್ ವರದರಾಜನ್ ನೇತೃತ್ವದ ವಿಜ್ಞಾನಿಗಳ ತಂಡ 2020ರ ನವೆಂಬರ್ನಲ್ಲಿ ನಡೆಸಿದ ಅಧ್ಯಯನ ವರದಿಯ ಬಗ್ಗೆ ಎಸಿಎಸ್ ಇನ್ಫೆಕ್ಟಿಯಸ್ ಡಿಸೀಸಸ್ ಜರ್ನಲ್ ಪೀರ್ನಲ್ಲಿ ಗುರುವಾರ ಪ್ರಕಟಗೊಂಡಿದೆ.
ಈ ವರದಿಯಂತೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ , ಲಸಿಕೆ ಪ್ರಯೋಗಕ್ಕೆ ಒಳಪಡಿಸಲಾದ ಇಲಿಗಳಲ್ಲಿ ರೋಗನಿರೋಧಕ ಶಕ್ತಿ ಅತ್ಯಂತ ಪ್ರಬಲವಾಗಿ ಮೂಡಿಬಂದಿರುವುದು ವ್ಯಕ್ತವಾಗಿದೆ. ಈ ಲಸಿಕೆಯನ್ನು ಒಂದು ತಿಂಗಳ ಕಾಲ 37 ಡಿಗ್ರಿ ತಾಪಮಾನದಲ್ಲಿ ಸುರಕ್ಷಿತವಾಗಿ ಕಾಯ್ದಿಡಬಹುದಾಗಿದ್ದು, 90 ನಿಮಿಷಗಳ ಕಾಲ 100 ಡಿಗ್ರಿ ತಾಪಮಾನದಲ್ಲಿ ರಕ್ಷಿಸಿಡಲು ಸಾಧ್ಯವಿದೆ. ಆಕ್ಸ್ಫರ್ಡ್-ಆಸ್ಟ್ರಾಜೆನಿಕ ಸೇರಿದಂತೆ ಬಹುತೇಕ ಲಸಿಕೆಗಳನ್ನು 2-8ಡಿಗ್ರಿ ತಾಪಮಾನದಲ್ಲಿ ಕಾಯ್ದಿಡಬೇಕಾಗಿದ್ದು, ಅಮೆರಿಕದ ಫೈಜರ್ಗಂತೂ
70 ಡಿಗ್ರಿ ಸೆಂಟಿಗ್ರೇಡ್ನ ವಿಶೇಷ ಶೈತ್ಯಗಾರದ ಅಗತ್ಯವಿದೆ.
ಈ ಲಸಿಕೆ ಮನುಷ್ಯನ ಶ್ವಾಸಕೋಶಕ್ಕೆ ಪ್ರವೇಶಿಸಿ ಸೋಂಕುಂಟು ಮಾಡುವ ವೈರಾಣುಗಳನ್ನು ಗುರಿಪಡಿಸಿ ಈ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಈ ಲಸಿಕೆಯ ಮುಂದಿನ I/II ಮತ್ತು IIIನೇ ಹಂತದ ಪರೀಕ್ಷೆ ಕೈಗೊಳ್ಳುವಲ್ಲಿ ಅನುದಾನ ಅಥವಾ ಆರ್ಥಿಕ ನೆರವು ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವರದರಾಜನ್ ತಿಳಿಸಿದ್ದಾರೆ. ಇದರ ಪರೀಕ್ಷೆಗಳಿಗಾಗಿ ಕನಿಷ್ಠ 30 ಕೋ.ರೂ.ಗಳು ತಕ್ಷಣಕ್ಕೆ ಅಗತ್ಯ ಇದೆ. ಸಿಎಸ್ಐಆರ್ಒ ಕೈಗೊಂಡ ವಿವಿಧ ಪರೀಕ್ಷೆಗಳ ಫಲಿತಾಂಷವೂ ಅತ್ಯಂತ ಉತ್ತೇಜನಕಾರಿಯಾಗಿದೆ ಎಂದು ಅವರು ಹೇಳಿದರು.
ಈಗ ಮತ್ತೆ ಜಗತ್ತಿನಾದ್ಯಂತ ಡೆಲ್ಟಾ ರೂಪಾಂತರಿ ಸೇರಿದಂತೆ ಕೊರೋನಾ ಸೋಂಕು ವ್ಯಾಪಕಗೊಳ್ಳುತ್ತಿರುವ ಆತಂಕದ ನಡುವೆ ಈ ಲಸಿಕೆ ಹೆಚ್ಚು ಭರವಸೆಯುಕ್ತವಾಗಿದೆ. ಯಾಕೆಂದರೆ ಇದು ಈ ವರೆಗಿನ ನಾಲ್ಕು ರೂಪಾಂತರಿಗಳನ್ನೂ ನಿಯಂತ್ರಿಸಬಲ್ಲದು ಎಂದು ಸಿಎಸ್ಐಆರ್ಓ ಹೇಳಿದ್ದರೆ, ಸಿಎಸ್ಐಆರ್ಒದ ಕೋವಿಡ್-19 ಪ್ರಾಜೆಕ್ಟ್ ನಾಯಕ ಮತ್ತು ಲೇಖನದ ಸಹಬರಹಗಾರರಾಗಿರುವ ಪ್ರೊ.ಎಸ್.ಎಸ್.ವಾಸನ್ ಅವರು ಕೂಡಾ ಈ ಲಸಿಕೆ ಈ ವರೆಗಿನ ಎಲ್ಲ ಕೊರೋನಾ ವೈರಾಣುಗಳನ್ನೂ ನಿಯಂತ್ರಿಸಲು ಶಕ್ತವಾಗಿದೆ ಎಂದಿದ್ದಾರೆ.