ವಧುದಕ್ಷಿಣೆ ಕೊಟ್ಟು ಮೇಕೆಯನ್ನು ವಿವಾಹವಾದ ವ್ಯಕ್ತಿ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರತಿದಿನ ಹೊಸ ಹೊಸ ಸುದ್ದಿ ಹರಿದುಬರುತ್ತಿವೆ. ಕೆಲವರು ಒಂದೇ ರಾತ್ರಿಗೆ ಫೃಮಸ್‌ ಆಗ್ಬಿಡ್ತಾರೆ. ಇನ್ನೂ ಕೆಲವು ಚಿತ್ರ-ವಿಚಿತ್ರ ಸುದ್ದಿಗಳು ಆಶ್ಚರ್ಯ ನಗು ತರಿಸುತ್ತಿವೆ. ಈ ಸಾಲಿಗೆ ಇಂಡೋನೇಷ್ಯಾದಲ್ಲಿ ನಡೆದ ಈ ವಿಚಿತ್ರ ಮದುವೆಯೂ ಕೂಡ ಒಂದು. ಇಂಡೋನೇಷಿಯಾದ ಯೂಟ್ಯೂಬರ್ ರಾತ್ರೋರಾತ್ರಿ ಫೇಮಸ್‌ ಆಗುವ ಹುಚ್ಚಿಟ್ಟುಕೊಂಡ ಆತ ಒಂದು ಹೆಣ್ಣು ಮೇಕೆಯೊಂದಿಗೆ ವಿವಾಹವಾಗಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಪೂರ್ವ ಜಾವಾದ ಗ್ರೀಸಿಕ್‌ನ 44 ವರ್ಷದ ಸೈಫುಲ್ ಆರಿಫ್ ಎಂಬ ವ್ಯಕ್ತಿ ಜೂನ್ 5 ರಂದು ಗ್ರೀಸ್‌ನ ಬೆನ್ಜೆಂಗ್ ಜಿಲ್ಲೆಯ ಕಂಪ್ಲೋಕೊ ಗ್ರಾಮದಲ್ಲಿ ರಹಾಯು ಬಿನ್ ಬೆಜೊ ಎಂಬ ಹೆಣ್ಣು ಮೇಕೆಯನ್ನು ಮದುವೆ ಮಾಡಿಕೊಂಡು ಎಲ್ಲವನ್ನು ವಿಡಿಯೋ ಮಾಡಿಸಿದ್ದಾನೆ.

ಈ ವಿಡಿಯೋದಲ್ಲಿ ಆರಿಫ್ ಜವಾನೀಸ್ ಡ್ರೆಸ್ ಧರಿಸಿದ್ದು, ಮೇಕೆಗೆ ಶಾಲು ಹೊದಿಸಿ ಅಲಂಕರಿಸಿದ್ದಾರೆ. ಸ್ಥಳೀಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಮದುವೆಯಲ್ಲಿ ಭಾಗವಹಿಸಿದ್ದರು. ಇನ್ನೂ ವಿಚಿತ್ರ ಸಂಗತಿ ಅಂದೆ ಮೇಕೆಗೆ 22,000 ರೂಪಾಯಿ ವಧುದಕ್ಷಿಣೆ ಕೊಟ್ಟಿದ್ದಾನಂತೆ. ಈ ವಿಡಿಯೋ ವೈರಲ್‌ ಆದ ನಂತರ ನೆಟ್ಟಿಗರು ಈತನ ವಿರುದ್ಧ ಕೆಂಡಾಂಡಲರಾಗಿದ್ದಾರೆ. ಬಳಿಕ ಈ ಬಗ್ಗೆ ಕ್ಷಮೆ ಕೇಳಿದ ಆತ ಕೇವಲ ಮನರಂಜನೆಗಾಗಿ ವಿಡಿಯೋ ಮಾಡಲಾಗಿದ್ದು, ಯಾರನ್ನೂ ಕೆಣಕುವ ಉದ್ದೇಶ ಹೊಂದಿಲ್ಲ ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!