ಹೊಸ ದಿಗಂತ ವರದಿ, ಕಲಬುರಗಿ:
ಜಾತಿಗಳ ವ್ಯವಸ್ಥೆ, ವಗ೯ಗಳ ವ್ಯವಸ್ಥೆಯಿಂದಲೇ, ಅಸಮಾನತೆ ನಿಮಾ೯ಣವಾಗಿದ್ದು, ಸಮ ಸಮಾಜ ನಿಮಾ೯ಣ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ನಗರದ ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಮಾವೇಶದಲ್ಲಿ ಮಾತನಾಡಿ, ಹಿಂದುಳಿದ ಹಾಗೂ ಬೇರೆ ಜಾತಿಯಲ್ಲಿರುವ ಜನರು, ಸಾಮಾಜಿಕ ನ್ಯಾಯದ ಬಗ್ಗೆ ಅಥ೯ ಮಾಡಿಕೊಳ್ಳಬೇಕು ಎಂದರು.
ನಮ್ಮ ಸಮಾಜದಲ್ಲಿ ಶ್ರೇಣಿಕೃತ ವ್ಯವಸ್ಥೆ ಜಾರಿಯಲ್ಲಿತ್ತು. ಸಮಾಜವನ್ನು ನಾಲ್ಕು ಭಾಗಗಳಲ್ಲಿ ವಿಂಗಡಣೆ ಮಾಡಲಾಗಿತ್ತು. ಬ್ರಾಹ್ಮಣರು, ಶುದ್ರರು,ಕ್ಷತ್ರಿಯರು ಹಾಗೂ ವೈಶ್ಯರು ಎಂದು ವಿಂಗಡಣೆ ಮಾಡಿದ್ದರು ಎಂದು ನುಡಿದರು.
ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದಾರೆ. ಸಮಾಜದ ತಾರತಮ್ಯ ಹೋಗಬೇಕಾದರೇ, ಜಾತಿ ವ್ಯವಸ್ಥೆ ಹೋಗಬೇಕೆಂದರು. ಅಧಿಕಾರ ಕೆಲವೇ ಕೆಲವು ಜನಗಳ ಕೇಂದ್ರಿಕೃತವಾಗಿರಬಾರದು. ಎಲ್ಲರಿಗೂ ಸಮವಾದ ಅಧಿಕಾರ ದೊರಕುವಂತೆಯಾಗಬೇಕೆಂದರು.
ಯಾರು ಸಂವಿಧಾನವನ್ನು ವಿರೋಧ ಮಾಡುತ್ತಾರೆ ಅವರು, ಮೀಸಲಾತಿ ಹಾಗೂ ಸಂವಿಧಾನದ ವಿರೋಧಿಗಳು ಎಂದು ಹೇಳಿದರು. ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಯಾರು ಹಿಂದುಳಿದಿದ್ದಾರೆಯೋ, ಅವರಿಗೆ ಮೀಸಲಾತಿ ದೊರೆಯಬೇಕು ಎಂದರು.
ಮೀಸಲಾತಿ ಸಂವಿಧಾನದಲ್ಲೇ,ಬರೆದಿದೆ.ಇದು ಯಾರ ಬಿಕ್ಷೆಯೂ ಅಲ್ಲ ಎಂದು ಪ್ರತಿಪಾದಿಸಿದರು. ಯಾವ ವ್ಯಕ್ತಿ ನಿಮ್ಮ ಪರವಾಗಿರುವನೋ,ಅವನ ಜೊತೆಯಲ್ಲಿ ಇರಿ,ಪರವಾಗಿ ಇಲ್ಲದೇ ಇದ್ದಲ್ಲಿ ಅವರನ್ನು ಬಿಟ್ಟು ಬಿಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ರಾಮಚಂದ್ರ, ಶಾಸಕ ಅಜಯ್ ಸಿಂಗ್,ಎಂ.ವೈ.ಪಾಟೀಲ್.ಖನೀಜ ಫಾತೀಮಾ, ಮಾಜಿ ಶಾಸಕ ಬಿ.ಆರ್.ಪಾಟೀಲ್, ತಿಪ್ಪಣಪ್ಪಾ ಕಮಕನೂರ, ಅಲ್ಲಂಪ್ರಭು ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು