ಇನ್ನೊಂದೇ ವರ್ಷದಲ್ಲಿ ಹಣದುಬ್ಬರ ಇಳಿಕೆ ಸಾಧ್ಯತೆ: ಅಶಿಮಾ ಗೋಯಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇನ್ನೊಂದೇ ವರ್ಷದಲ್ಲಿ ದೇಶದ ಹಣದುಬ್ಬರವು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI)ದ ಹಣಕಾಸು ಸಮಿತಿ (MPC) ಸದಸ್ಯೆ ಅಶಿಮಾ ಗೋಯಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಹಣಕಾಸು ಪರಿಸ್ಥಿತಿಗಳನ್ನು ನಿಭಾಯಿಸಲು ಆರ್‌ಬಿಐ ಪೂರಕ ನಿರ್ಣಯಗಳನ್ನು ತೆಗೆದುಕೊಂಡಿದ್ದು ಹಣದುಬ್ಬರವನ್ನು ಕಡಿಮೆ ಮಾಡುವ ಗುರಿಯೊಂದಿಗೆ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ ಇದು ಬೆಲೆ ಏರಿಕೆ ದರವನ್ನು ಹತೋಟಿಯಲ್ಲಿಟ್ಟಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅಶಿಮಾ ಗೋಯಲ್ “ಕಳೆದ ಮೂರು ವರ್ಷಗಳಲ್ಲಿ ಭಾರತವು ಹಲವಾರು ಆಂತರಿಕ ಆರ್ಥಿಕ ಆಘಾತಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಜೊತೆಗೆ ಆರ್ಥಿಕ ಕುಸಿತದ ನಡುವೆಯೂ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದು ಬಾಹ್ಯ ಪೂರೈಕೆ ಆಘಾತಗಳಿಂದ ಭಾರತದ ಹಣದುಬ್ಬರವು ಏರಿಕೆಯಾಗದಂತೆ ತಡೆದಿದ್ದು ಉಳಿದೆಲ್ಲ ದೇಶಗಳಿಗಿಂತ ಕಡಿಮೆ ದರದಲ್ಲಿರುವಂತೆ ಮಾಡಿದೆ” ಎಂದು ಹೇಳಿದ್ದಾರೆ.

ಆರ್‌ಬಿಐ ರೆಪೋದರ ಏರಿಕೆ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು “ಬೆಲೆ ಏರಿಕೆದರವನ್ನು ನಿಯಂತ್ರಣದಲ್ಲಿಡಲು ಹಣದುಬ್ಬರಕ್ಕೆ ತಕ್ಕಂತೆ ನೀತಿದರಗಳನ್ನ ಏರಿಕೆ ಮಾಡಲಾಗುತ್ತದೆ ಇದು ಬೆಲೆ ಏರಿಕೆಯನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಅಲ್ಲದೇ ಸಾಂಕ್ರಾಮಿಕ ಸಮಯದಲ್ಲಿ ನೀತಿ ದರಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ, ಆದ್ದರಿಂದ ಚೇತರಿಕೆ ಸಮಯದ ನಂತರ ಅವುಗಳನ್ನು ತ್ವರಿತವಾಗಿ ಹೆಚ್ಚಿಸಲಾಗಿದೆ” ಎಂದು ಗೋಯಲ್ ವಿವರಣೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!