ಆಂತರಿಕ ಪರೀಕ್ಷೆಯಲ್ಲಿ ಫೇಲ್‌ ಆದ 600 ಹೊಸಬರನ್ನು ವಜಾಗೊಳಿಸಿದ ಇನ್ಫೋಸಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಹೆಸರಾಂತ ಐಟಿಕಂಪನಿ ಇನ್ಪೋಸಿಸ್‌ ಕಂಪನಿಯು ತನ್ನಲ್ಲಿ ಕೆಲಸಮಾಡುತ್ತಿದ್ದ 600ಕ್ಕೂ ಅಧಿಕ ಫ್ರೆಷರ್‌ ಗಳನ್ನು ಹೊರಹಾಕಿದೆ. ಕಂಪನಿಯು ಆಂತರಿಕ ಮೌಲ್ಯಮಾಪನ ಪರೀಕ್ಷೆಗಳನ್ನು ನಡೆಸಿದ್ದು ಇದರಲ್ಲಿ ಅನುತ್ತೀರ್ಣರಾದ 600ಕ್ಕೂ ಅಧಿಕ ಹೊಸಬರನ್ನು ಹೊರಹಾಕಿದೆ.

ಒಟ್ಟಾರೆಯಾಗಿ ವಜಾಗೊಂಡಿರುವ 600 ಫ್ರೆಶರ್‌ಗಳಲ್ಲಿ, 208 ಮಂದಿಯನ್ನು ಎರಡು ವಾರಗಳ ಹಿಂದೆ ವಜಾ ಮಾಡಲಾಗಿದೆ. ಆದರೆ ಕಳೆದ ವರ್ಷ ಜುಲೈಗಿಂತ ಮೊದಲು ಕೆಲಸಕ್ಕೆ ಸೇರಿದವರಿದ್ದರೆ ಅಂಥವರು ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ವಿಫಲವಾದರೂ ವಜಾಗೊಳಿಸಲಾಗಿಲ್ಲ.

ಈ ಕುರಿತು ಕಂಪನಿಯ ಪ್ರತಿನಿಧಿಯು ಪ್ರತಿಕ್ರಿಯಿಸಿದ್ದು ಆಂತರಿಕ ಪರೀಕ್ಷೆಗಳಲ್ಲಿ ವಿಫಲವಾಗುವುದು ಯಾವಾಗಲೂ ಉದ್ಯೋಗಕಡಿತಕ್ಕೆ ಕಾರಣವಾಗುತ್ತದೆ ಎಂದು ಬಿಸ್ನೆಸ್‌ ಟುಡೇಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!