ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದಾದ್ಯಂತ ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನಡೆಸಿದ ‘ಸುಲಲಿತ ಜೀವನ ಸೂಚ್ಯಂಕ’ದ (ಈಸಿ ಆಫ್ ಲಿವಿಂಗ್ ಇಂಡೆಕ್ಸ್) ನಗರಗಳ ಪೈಕಿ ಬೆಂಗಳೂರು ವಾಸಯೋಗ್ಯ ನಗರ ಎಂಬ ಅಗ್ರ ಸ್ಥಾನ ಪಡೆದಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಬಿಡುಗಡೆ ಮಾಡಿದ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020ರಲ್ಲಿ ಬೆಂಗಳೂರು ಉನ್ನತ ನಗರವಾಗಿದ್ದು 111 ನಗರಗಳಲ್ಲಿ ಪುಣೆ ಎರಡನೇ ಮತ್ತು ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ.
ಒಂದು ದಶಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮತ್ತು ಒಂದು ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಿಗೆ ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020ರ ಶ್ರೇಯಾಂಕ ಘೋಷಿಸಲಾಯಿತು. 2020ರಲ್ಲಿ ನಡೆಸಿದ ಮೌಲ್ಯಮಾಪನದಲ್ಲಿ 111 ನಗರಗಳು ಇದ್ದವು.
ಮಿಲಿಯನ್ ಜನಸಂಖ್ಯೆ ವಿಭಾಗದಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದ ನಂತರ ಪುಣೆ, ಅಹಮದಾಬಾದ್, ಚೆನ್ನೈ, ಸೂರತ್, ನವಿ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್, ಮತ್ತು ಗ್ರೇಟರ್ ಮುಂಬೈ ನಂತರದ ಸ್ಥಾನಗಳಲ್ಲಿವೆ.
ಮಿಲಿಯನ್ಗಿಂತ ಕಡಿಮೆ ವಿಭಾಗದಲ್ಲಿ ಶಿಮ್ಲಾ ಜೀವನ ಸುಲಭದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದರೆ ಭುವನೇಶ್ವರ, ಸಿಲ್ವಾಸ್ಸಾ, ಕಾಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ಗುರುಗ್ರಾಮ್, ಮತ್ತು ತಿರುಚಿರಾಪಳ್ಳಿ ನಂತರದ ಸ್ಥಾನದಲ್ಲಿವೆ.