Wednesday, August 17, 2022

Latest Posts

ಒಂದೇ ಇನ್ಕ್ಯುಬೇಟರ್’ನಲ್ಲಿ ಮೂರು ಮಕ್ಕಳಿಗೆ ಚಿಕಿತ್ಸೆ: ಅಫ್ಘಾನ್ ಆಸ್ಪತ್ರೆಗಳ ಈ ಪರಿಸ್ಥಿಗೆ ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿಕೊಂಡ ಕೆಲವು ತಿಂಗಳಲ್ಲಿಯೇ ಅಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದ್ದು, ಜನರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ.
ಕಾಬೂಲ್ ನ ಮಕ್ಕಳ ಆಸ್ಪತ್ರೆಯಲ್ಲಿ ಆರೈಕೆ ಮಾಡಲು ವೈದ್ಯ ಸಿಬ್ಬಂದಿಗಳೇ ಇಲ್ಲ! ಮಕ್ಕಳ ಆರೋಗ್ಯ ನೋಡಿಕೊಳ್ಳಲು ಕಷ್ಟಪಡುತ್ತಿರುವ ಸಿಬ್ಬಂದಿ ಒಂದೇ ಇನ್ಕ್ಯುಬೇಟರ್ ನಲ್ಲಿ ಮೂವರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

As crowds of mothers and sick children fill waiting rooms in the Indira Gandhi Children's Hospital, medical staff are squeezing three babies into a single incubator and doubling them up in cot-like infant warmer beds. REUTERS/Jorge Silvaತಾಲಿಬಾನ್ ಆಕ್ರಮಣದ ವೇಳೆ ಅಫ್ಘಾನಿಸ್ತಾನದಿಂದ ಸಾಕಷ್ಟು ವೈದ್ಯರು ಕೂಡ ಬೇರೆ ದೇಶಗಳಿಗೆ ಪಲಾಯನಗೊಂಡಿದ್ದು, ಈಗ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ.
ತಲಾ ಮೂರರಿಂದ ನಾಲ್ಕು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿ, ಈಗ 20ಕ್ಕಿಂತ ಹೆಚ್ಚು ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ. ನಾವು ಈ ರೀತಿ ಮಾಡದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ಇದರಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ನಷ್ಟವಾಗಲಿದೆ ಎಂದು ಡಾ. ಸೈಫುಲ್ಲಾ ಅಬಾಸಿನ್ ತಿಳಿಸಿದ್ದಾರೆ.

For the medical team, it is the acute staff shortage that is causing the heaviest strain. They have not been paid in months and often struggle even to pay their car fare to work. "We only ask from the government firstly that, they should increase our staff," says Marwa, the nursing supervisor in the nursery ward. "Because of the changes, most of our colleagues left the country." REUTERS/Jorge Silvaಅಫ್ಘಾನಿಸ್ತಾನದಲ್ಲಿನ ಹೋರಾಟದ ನಂತರ ಸಾವಿನ ಸಂಖ್ಯೆ ಕಡಿಮೆಯಾಗಿದ್ದರೂ, ಆರ್ಥಿಕ ಬಿಕ್ಕಟ್ಟು ಜನರನ್ನು ಹಸಿವಿನಿಂದ ನರಳುವಂತೆ ಮಾಡಿದೆ. ಕಳೆದ ತಿಂಗಳು ದೇಶದ ಶೇ.95ರಷ್ಟು ಜನರಿಗೆ ಆಹಾರದ ಕೊರತೆ ಕಾಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿತ್ತು.
ಅಷ್ಟೇ ಅಲ್ಲ..ಮುಂಚಿಗಿಂತ ಹೆಚ್ಚು ಶ್ರಮಿಸುತ್ತಿರುವ ಈ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಸಂಬಳ ಹಾಗೂ ಶುಲ್ಕ ಪಾವತಿ ಮಾಡುತ್ತಿಲ್ಲ. ಈ ಸಮಸ್ಯೆ ಕುರಿತು ಸರ್ಕಾರದ ಮೊರೆ ಹೋಗಲಿದ್ದೇವೆ. ನಮಗೆ ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ ಎಂದು ನರ್ಸ್ ಮಾರ್ವಾ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!