Friday, July 1, 2022

Latest Posts

ಮೂರ್ಖರಿಗಾಗಿ ಸಮಯ ಹಾಳು ಮಾಡುವುದು ದೊಡ್ಡ ಮೂರ್ಖತನ!

ಒಂದು ದಿನ ರಾಜ ಹಾಗೂ ಆತನ ಮಂತ್ರಿ ಸಾಯಂಕಾಲ ಹೀಗೇ ಉದ್ಯಾನವನದಲ್ಲಿ ವಿಹಾರ ಮಾಡುತ್ತಿರುತ್ತಾರೆ. ಆಗ ರಾಜ ಮಂತ್ರಿಗೆ ಕೇಳುತ್ತಾನೆ ” ನಮ್ಮ ರಾಜ್ಯದಲ್ಲಿ ಬುದ್ಧಿವಂತರು ಸಂಖ್ಯೆ ಹೆಚ್ಚೋ? ಮೂರ್ಖರ ಸಂಖ್ಯೆ ಹೆಚ್ಚೋ? ಎಂದು..

ಅದಕ್ಕೆ ಮಂತ್ರಿ ಹೇಳುತ್ತಾನೆ ” ಮೂರ್ಖರ ಸಂಖ್ಯೆಯೇ ಹೆಚ್ಚು” ಎಂದು.. ಆದರೆ ಈ ಮಾತನ್ನು ರಾಜ ಒಪ್ಪುವುದಿಲ್ಲ. ಇಲ್ಲ ನಮ್ಮ ರಾಜ್ಯದಲ್ಲಿ ಮೂರ್ಖರಿಗಿಂತ ಬುದ್ಧವಂತರೇ ಹೆಚ್ಚಿದ್ದಾರೆ” ಎನ್ನುತ್ತಾನೆ.  ಇದೇ ವಿಚಾರವಾಗಿ ಮಂತ್ರಿ ಮತ್ತು ರಾಜ ನಡುವೆ ಸಾಕಷ್ಟು ವಿವಾದ ನಡೆಯುತ್ತದೆ.

ಕೊನೆಗೆ ರಾಜ “ನಮ್ಮ ನಮ್ಮಲ್ಲಿ ಏಕೆ ಚರ್ಚೆ? ಪರೀಕ್ಷಿಸಿ ನೋಡೋಣ” ಎನ್ಜುತ್ತಾನೆ. ತನ್ನ ಸೇವಕರಿಗೆ ರಾಜ ಡಂಗೂರು ಸಾರಲು ಹೇಳಿದ. ” ನಮ್ಮ ರಾಜ್ಯದಲ್ಲಿರುವ ಜನ ತಮ್ಮ ಮೂರ್ಖತನವನ್ನು ಪ್ರದರ್ಶಿಸಿದ ಬಗೆಗಳನ್ನು ವಿವರಿಸಬೇಕು. ಯಾರು ಅತಿ ಹೆಚ್ಚು ಮೂರ್ಖತನ ಪ್ರದರ್ಶಿಸುತ್ತಾರೋ ಅವರಿಗೆ 50 ಚಿನ್ನದ ನಾಣ್ಯ ಬಹುಮಾನ” ಎಂದು ಘೋಷಿಸಿದ.

ಡಂಗೂರು ಕೇಳಿದ ಜನ ಅರಮನೆ ಎದುರು ಸಾಲು ಸಾಲು ಮುಗಿಬಿದ್ದು, ತಮ್ಮ ಮೂರ್ಖತನವನ್ನು ವಿವರಿಸತೊಡಗಿದರು.

ಒಬ್ಬ, “ಮಹಾಪ್ರಭೂ, ನಾನು ಮೀನಿಲ್ಲದ ಕೆರೆಯಲ್ಲಿ ದಿನವಿಡೀ ಮೀನುಹಿಡಿಯುತ್ತಿದ್ದೆ’ ಅಂದ. ಇನ್ನೊಬ್ಬ, “ಸ್ವಾಮೀ ನಾನು ಕತ್ತೆಗೆ ಭಾರ ಆಗಬಾರದೆಂದು ಮೂಟೆ ಹೊತ್ತಿದ್ದ ಕತ್ತೆಯನ್ನು ಹೆಗಲಮೇಲೆ ಹೊರಿಸಿಕೊಂಡೆ’ ಅಂದ. ಮತ್ತೊಬ್ಬ  ಬೆಕ್ಕಿನ ಮರಿನಾ ಹಗ್ಗ ಕಟ್ಟಿ ಎಳೆದುಕೊಂಡು ಬಂದಿದ್ದೆ ಅಂದ. ಹೀಗೆ ಹತ್ತಾರು ಮಂದಿ ತಮ್ಮ ಮೂರ್ಖತನದ ಬಗ್ಗೆ ಹೇಳುತ್ತಿದರು.

ಇದನ್ನು ಕಂಡು ಚಕಿತನಾದ ರಾಜ ಮಂತ್ರಿಯಲ್ಲಿ ಕೇಳಿದ, ” ಮಂತ್ರಿ, ನಮ್ಮ ರಾಜ್ಯದಲ್ಲಿರುವ ಜನರಲ್ಲಿ ಬುದ್ಧಿವಂತರಿಗಿಂತ ಹೆಚ್ಚು ಮೂರ್ಖರೇ ಇದ್ದಾರೆ. ನಿನಗೆ ಹೇಗೆ ಇಷ್ಟೊಂದು ಮಂದಿ ಮೂರ್ಖರಿದ್ದಾರೆ ಎಂದು ಗೊತ್ತಾಯಿತು ಎಂದು ಕೇಳಿದ?

ಅಷ್ಟೊತ್ತಿಗಾಗಲೇ ಮಂತ್ರಿಗೆ ತನ್ನ ಮೂರ್ಖತನದ ಅರಿವಾಗಿತ್ತು. ಅವನು ರಾಜನಲ್ಲಿ, “ಇಂಥ ಮೂರ್ಖರಿಗಾಗಿ ನಮ್ಮ ಅಮೂಲ್ಯ ಸಮಯ ಹಾಳು ಮಾಡುತ್ತಿದ್ದೇವಲ್ಲ ಪ್ರಭೂ, ನಾವೆಂಥ ಮೂರ್ಖರು’ ಎಂದಾಗ ರಾಜನಿಗೂ ತನ್ನ ಮೂರ್ಖತನದ ಅರಿವಾಯಿತು.

“ಮೂರ್ಖತನದ ಕೆಲಸಕ್ಕಾಗಿ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವುದು ಕೂಡ ಮೂರ್ಖತನವೇ”

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss