Thursday, July 7, 2022

Latest Posts

ಹೊಟ್ಟೆ ತುಂಬಾ ಊಟ ಮಾಡ್ತಿದ್ದ, ವ್ಯಾಯಮ- ಕೆಲಸ ಏನೂ ಮಾಡದಿದ್ರೂ ತೂಕ ಕಳೆದುಕೊಂಡ! ಇದು ಹೇಗೆ ಸಾಧ್ಯ?

ಒಂದು ದಿನ ರಾಜನ ಆಸ್ಥಾನಕ್ಕೆ ಒಬ್ಬ ವಿದೇಶಿ  ಬಂದು ರಾಜನಿಗೊಂದು ಸವಾಲು ಹಾಕುತ್ತಾನೆ. ಅದೇನೆಂದರೆ “ವಿದೇಶಿಗನೊಂದಿಗೆ ಬಂದಿರುವ ಯುವಕನನ್ನು ಒಂದು ತಿಂಗಳು ಚೆನ್ನಾಗಿ ನೋಡಿಕೊಳ್ಳಬೇಕು. ಹೊತ್ತಿಗೆ ಸರಿಯಾಗಿ ಊಟ, ತಿಂಡಿ, ಹಣ್ಣು-ಹಂಪಲು ಕೊಡಬೇಕು. ಆದರೆ ಆತನಿಂದ ಯಾವುದೇ ಕೆಲಸ, ವ್ಯಾಯಾಮ  ಮಾಡಿಸಬಾರದು. ಹೀಗಿದ್ದು ಆತನ ತೂಕ ಮಾತ್ರ ಸ್ವಲ್ಪವೂ ಏರಬಾರದು” ಇದು ಸವಾಲು

“ರಾಜ ಈ ಸವಾಲನ್ನು ಸ್ವೀಕರಿಸುತ್ತೀರಾ ಇಲ್ಲವೇ, ಸೋಲನ್ನು ಒಪ್ಪಿಕೊಳ್ಳುತ್ತೀರಾ” ಎಂದು ವಿದೇಶಿ ರಾಜನಿಗೆ ಕೇಳುತ್ತಾನೆ.

ರಾಜ ಈ ಸವಾಲನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುತ್ತಿರುವಾಗ ಮಂತ್ರಿ “ನಮಗೆ ಈ ಸವಾಲು ಒಪ್ಪಿಗೆ” ಇದೆ ಎಂದು ಹೇಳುತ್ತಾನೆ. ಆದರೆ ರಾಜನಿಗೆ ನಾವು ಸವಾಲಿನಲ್ಲಿ ಸೋಲುತ್ತೇವೆ ಎಂಬ ತಳಮಳ ಇರುತ್ತದೆ.

ವಿದೇಶಿ ಆ ಯುವಕನನ್ನು ಅಲ್ಲಿಯೇ ಬಿಟ್ಟು ತವರಿಗೆ ಮರಳುತ್ತಾನೆ. ಬರೋಬ್ಬರಿ ಒಂದು ತಿಂಗಳ ನಂತರ ಮತ್ತೆ ರಾಜನ ಆಸ್ಥಾನಕ್ಕೆ ಬರುತ್ತಾನೆ. ದಷ್ಟಪುಷ್ಟವಾಗಿದ್ದ ಯುವಕ ಪೊರಕೆ ಕಡ್ಡಿಯಂತಾಗಿರುತ್ತಾನೆ. ವಿದೇಶಿಗನಿಗೆ ಇದು ಹೇಗೆ ಸಾಧ್ಯವಾಯಿತು ಎಂಬುದು ಗೊತ್ತಾಗುವುದಿಲ್ಲ.ʼ

ಯುವಕನಲ್ಲಿ ಕೇಳುತ್ತಾನೆ “ನಿನಗೆ ಊಟ, ತಿಂಡಿ ಸರಿಯಾಗಿ ಕೊಡುತ್ತಿದ್ದರೇ?, ಏನಾದರೂ ಕೆಲಸ, ವ್ಯಾಯಾಮ ಮಾಡಿಸಿದ್ದಾರಾ?”ಎಂದು. “ಹೊತ್ತು ಹೊತ್ತಿಗೂ ಹೊಟ್ಟೆಗೆ ಸರಿಯಾಗಿ ಕೊಡುತ್ತಿದ್ದರು, ಯಾವುದೇ ಕೆಲಸ, ವ್ಯಾಯಾಮ ಮಾಡಿಸಿಲ್ಲ” ಎಂದು ಯುವಕ ಹೇಳುತ್ತಾನೆ.

ವಿದೇಶಿಗನಿಗೆ ಹೇಗೆ ಇದು ಸಾಧ್ಯವಾಯಿತು ಎಂಬುದು ಗೊತ್ತಾಗದೇ ರಾಜನಿಗೆ ಕಪ್ಪ ಕೊಟ್ಟು ಯುವಕನನ್ನು ಕರೆದುಕೊಂಡು ಹೋಗುತ್ತಾನೆ.

ನಂತರ ರಾಜ ಆಶ್ಚರ್ಯದಿಂದ ಮಂತ್ರಿಯನ್ನು ಕೇಳುತ್ತಾನೆ. ” ಏನು ಚಮತ್ಕಾರ ಮಾಡಿದೆ ಮಂತ್ರಿ” ಎಂದು.

ಆಗ ಮಂತ್ರಿ ಹೇಳುತ್ತಾನೆ. ” ಚಮತ್ಕಾರ ಏನಿಲ್ಲ ರಾಜರೇ, ಆ ಯುವಕನ ಕೋಣೆ ಪಕ್ಕದಲ್ಲಿ ಸಿಂಹವಿರುವ ಬೋನನ್ನು ಇಟ್ಟಿದೆ. ಯುವಕನಿಗೆ ನಿನ್ನ ಹುಷಾರಲ್ಲಿ ನೀನಿರಬೇಕು. ಈ ಹಸಿದ ಸಿಂಹದ ಬೋನಿನ ಚಿಲಕ ಅಷ್ಟೊಂದು ಸರಿಯಾಗಿಲ್ಲ ಎಂದು ಹೇಳಿದ್ದೆ”.

“ಆತನಿಗೆ ಜೀವ ಭಯದಿಂದಾಗಿ ತಿಂದಿರುವ ಆಹಾರ ಮೈಗಂಟಲಿಲ್ಲ. ಭಯದಲ್ಲಿ ತೂಕ ಕಡಿಮೆ ಆಗಿದೆ” ಎಂದು ಮಂತ್ರಿ ಹೇಳಿದ. ರಾಜ ಮಂತ್ರಿಯ ಬುದ್ಧಿವಂತಿಕೆಗೆ ಮೆಚ್ಚಿಕೊಂಡು ಅದ್ಧೂರಿಯಾಗಿ ಸನ್ಮಾನ ಮಾಡಿದ.

“ಯಾವಾಗ ನಮ್ಮ ಮನಸ್ಸಿನಲ್ಲಿ ಭಯವೆಂಬ ಭೂತ ಹೊಕ್ಕುವುದೋ ಆಗ ನಾವು ಅಂದುಕೊಂಡ ಯಾವ ಕಾರ್ಯವೂ ನೆರವೇರುವುದಿಲ್ಲ. ಮೊದಲು ಮನಸ್ಸಿನಲ್ಲಿ ಹೊಕ್ಕಿರುವ ಭಯವನ್ನು ಕಿತ್ತು ಬಿಸಾಕಿ. ನಂತರ ನಾವು ಅಂದುಕೊಂಡ ಎಲ್ಲ ಕಾರ್ಯವೂ ಸಾಧ್ಯ”.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss