spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ಕಥೆ ಓದಿದಮೇಲೆ ನೀವೇ ನಿರ್ಧರಿಸಿ, ಇಲ್ಲಿ ಯಾರು ಬಡವ? 

- Advertisement -Nitte

ತುಂಬಾ ಶ್ರೀಮಂತನಾದ ತಂದೆಯೊಬ್ಬ ತನ್ನ ಮಗನಿಗೆ ಬಡತನದ ಪಾಠ ಮಾಡಬೇಕು ಅಂದುಕೊಂಡ. ಮಗ ಶ್ರೀಮಂತಿಕೆಗೆ ಒಗ್ಗದೇ ಬಡತನದ ಬಗ್ಗೆಯೂ ತಿಳಿದುಕೊಳ್ಳಬೇಕು, ಹಣ ಪೋಲುಮಾಡಬಾರದು ಅನ್ನೋದು ಅವನ ಉದ್ದೇಶವಾಗಿತ್ತು.

ಇದಕ್ಕಾಗಿ ತಂದೆ ಮಗನನ್ನ ಹಳ್ಳಿಗೆ ಕರೆದುಕೊಂಡ ಹೋದ. ಹಳ್ಳಿಯಲ್ಲಿ ಎರಡು ದಿನ ಮಗ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ.

ಹಳ್ಳಿಯಿಂದ ತಮ್ಮ ಬಂಗಲೆಗೆ ವಾಪಾಸಾಗುವಾಗ ಅಪ್ಪ ಮಗನನ್ನು ಕೇಳಿದ. ʼಹೇಗಿತ್ತು ಬಡತನದ ದರ್ಶನ? ಇದರಿಂದ ಏನು ಕಲಿತೆʼ ಎಂದ.

ಅದಕ್ಕೆ ಮಗ, ನಮ್ಮ ಬಳಿ ಒಂದು ನಾಯಿ ಇದೆ, ಅವರ ಬಳಿ ನಾಲ್ಕು ನಾಯಿ ಇದೆ.
ನಮ್ಮ ಬಳಿ ಸ್ವಿಮ್ಮಿಂಗ್ ಪೂಲ್ ಇದೆ, ಅವರ ಬಳಿ ನದಿಯೇ ಇದೆ.
ನಮ್ಮ ಬಳಿ ಫಳಫಳನೆ ಹೊಳೆಯುವ ಲೈಟ್‌ಗಳಿವೆ, ಅವರ ಬಳಿ ನಕ್ಷತ್ರಗಳಿವೆ.
ನಮ್ಮ ಮನೆಗೆ ನಾಲ್ಕು ಗೋಡೆಗಳು, ಇವರ ಮನೆಗೆ ಊರೇ ಕಾವಲು ಇದೆ.
ಥ್ಯಾಂಕ್ಸ್ ಅಪ್ಪ, ನಾವೆಷ್ಟು ಬಡವರು ಎಂದು ತಿಳಿಸಿಕೊಟ್ಟಿದ್ದಕ್ಕೆ!

“ಶ್ರೀಮಂತಿಕೆ ಅಳೆಯೋದು ಹಣದಿಂದಲ್ಲ, ಹಣ ಇಂದು ನಿಮ್ಮದಾದರೆ ನಾಳೆ ಇನ್ಯಾರದ್ದೋ, ಆದರೆ ಜನರ ಸ್ನೇಹ ಗಳಿಸೋದು ಮುಖ್ಯ. ನೀವು ಸತ್ತಾಗ ನಿಮ್ಮ ಹಣದ ಬಗ್ಗೆ ನಾಲ್ಕು ಮಂದಿ ಮಾತನಾಡುತ್ತಾರೆ. ಆದರೆ ನಿಮ್ಮ ಗುಣದ ಬಗ್ಗೆ ಸಾವಿರ ಮಂದಿ ಮಾತನಾಡುವಂತಿರಬೇಕು. ಹಣದಿಂದ ಯಾರನ್ನೂ ಅಳೆಯಬೇಡಿ, ಅಳೆಯಲು ಬಂದರೆ ಸುಮ್ಮನೆಯೂ ಇರಬೇಡಿ”!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss