spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

“ನಿನ್ನಲ್ಲಿ ಎಲ್ಲವೂ ಖಾಲಿ ಏನೇನು ಇಲ್ಲ ಎಂದ ಮೇಲೆ ಕೋಪ ಎಲ್ಲಿಂದ ಬಂತು”

- Advertisement -Nitte

ಪ್ರವೀಣ ಎನ್ನುವ ಹುಡುಗನಿದ್ದ. ಆತನಿಗೆ ತಾನು ಎಲ್ಲವನ್ನೂ ತಿಳಿದಿದ್ದೇನೆನ್ನು ಅಹಂ ಇತ್ತು. ಹಾಗಾಗಿ ಆತ ತನಗಿಂತ ಹೆಚ್ಚಿನ ಜ್ಞಾನ ಹೊಂದಿರುವ ಗುರುಗಳಿಗಾಗಿ ಹುಡುಕಾಡುತ್ತಿದ್ದ.

ಒಂದು ದಿನ ಹೀಗೆ ಗುರುಗಳನ್ನು ಹುಡುಕುತ್ತ ಬೇರೆ ಬೇರೆ ಊರುಗಳಿಗೆ ಅಲೆಯುತ್ತಿರುವಾಗ ಒಂದು ಆಶ್ರಮ ಕಾಣುತ್ತದೆ. ಅದರ ಎದುರಿದ್ದ  ಆಲದ ಮರದ ಬುಡದಲ್ಲಿ ಕಾವಿ ಧರಿಸಿ ಕುಳಿತಿರುವ ಗುರುವೊಬ್ಬರು ಕಾಣುತ್ತಾರೆ. ಪ್ರವೀಣನಿಗೆ ಬಹಳ ಖುಷಿಯಾಯಿತು ತಕ್ಷಣ ಅವರ ಬಳಿ ಬಂದ.

ಅವರು ಚುಟ್ಟಾ ಸೇದುತ್ತಾ ಕುಳಿತಿದ್ದರು. ಈತ ತನ್ನ ಮನಸ್ಸಿನಲ್ಲಿಯೇ ʼಇವರೆಂತ ಗುರು ಚುಟ್ಟಾ ಸೇದುತ್ತಿದ್ದಾರಲ್ಲʼ ಎಂದುಕೊಂಡ.

ತಕ್ಷಣ ಆ ಗುರುಗಳು “ನಿನಗೇನು ಬೇಕು ಮಗು?” ಎಂದು ಪ್ರವೀಣನನ್ನು ಕೇಳಿದರು.

ಈತ ತನ್ನ ಪಾಂಡಿತ್ಯ ಪ್ರದರ್ಶಿಸಲು ಶುರುಮಾಡಿದ “ಮನಸ್ಸೆಂಬುದಿಲ್ಲ, ಜ್ಞಾನವೆಂಬುದಿಲ್ಲ, ಬುದ್ಧಿ ಎಂಬುದಿಲ್ಲ, ಪಾಪಿಗಳಿಲ್ಲ, ಆಸೆಯಿಲ್ಲ, ಸಂತನೆಂಬುವವನಿಲ್ಲ, ಭ್ರಮೆ ಎಂಬುದಿಲ್ಲ. ಎಲ್ಲವೂ ಖಾಲಿ… ಅಸ್ಥಿತ್ವ ಎಂಬುದೇ ಇಲ್ಲ” ಎಂದ.

ಗುರುಗಳು ಆತ ಹೇಳುವುದನ್ನು ಸರಿಯಾಗಿ ಕೇಳಿಕೊಂಂಡರು. ತಕ್ಷಣ ಚುಟ್ಟಾ ಹೊಗೆಯನ್ನು ಪ್ರವೀಣನ ಮುಖಕ್ಕೆ ಬಿಟ್ಟರು.

ಪ್ರವೀಣನಿಗೆ ಕೋಪ ನೆತ್ತಿಗೇರಿತು.. “ನೀನೆಂಥ ಗುರು? ನಿಮ್ಮಂಥವರಿಂದಲೇ ಇಂದು ಸಮಾಜ ಹಾಳಾಗ್ತಿರೋದು” ಅಂತೆಲ್ಲ ಕೂಗಾಡಿದ.

“ಎಲ್ಲವೂ ಖಾಲಿ ಎಂದ ಮೇಲೆ ನಿನಗೆ ಕೋಪ ಬಂದಿದ್ದು ಎಲ್ಲಿಂದ”? ಎಂದು ಗುರುಗಳು ಕೇಳಿದರು… ಆತ ಮರು ಮಾತಾಡದೇ ತನ್ನ ಬಟ್ಟೆ ಗಂಟನ್ನು ಆಶ್ರಮದಲ್ಲಿಟ್ಟು ಅಂಗಳದ ಕಸ ಗುಡಿಸಲು ಆರಂಭಿಸಿದ.

ಯಾವತ್ತೂ ನಮ್ಮಲ್ಲಿ “ತಾನು ಎಲ್ಲವನ್ನೂ ತಿಳಿದ್ದೇನೆ ಎಂಬ ಅಹಂ ಹುಟ್ಟಿಕೊಳ್ಳಬಾರದು. ಕಲಿಕೆ ನಿರಂತರ. ಅದಕ್ಕೆ ಅಂತ್ಯ ಎಂಬುದಿಲ್ಲ. ದೊಡ್ಡ  ಜ್ಞಾನಿ, ಪಂಡಿತ ಎನಿಸಿಕೊಳ್ಳುವವರಿಗು ಕೂಡ ಎಷ್ಟೋ ಚಿಕ್ಕ ವಿಷಯಗಳೇ ಗೊತ್ತಿಲ್ಲದೆ ಇರಬಹುದು”

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss