spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸುಳ್ಳು ಹೇಳಿ ಪರೀಕ್ಷೆ ತಪ್ಪಿಸಿಕೊಂಡ ಹುಡುಗರು ಸಿಕ್ಕಿ ಬಿದ್ದಿದ್ದು ಹೇಗೆ ನೋಡಿ…

- Advertisement -Nitte

ನಾಲ್ವರು ಬೆಸ್ಟ್‌ ಫ್ರೆಂಡ್ಸ್‌ ಇರುತ್ತಾರೆ. ಅವರಿಗೆ ಮರು ದಿನ ಪರೀಕ್ಷೆ ಇರುತ್ತದೆ. ಆದರೆ ಪರೀಕ್ಷೆ ಇದೆ ಎಂಬುದನ್ನು ಮರೆತು ಹಿಂದಿನ ರಾತ್ರಿ ಪೂರ್ತಿ ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಮುಳುಗಿ ಹೋಗುತ್ತಾರೆ. ಪರೀಕ್ಷೆಗೆ ಸ್ವಲ್ಪವೂ ಓದಿಕೊಂಡಿರುವುದಿಲ್ಲ. ಹಾಗಾಗಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕುತ್ತಾರೆ.

ಮರು ದಿನ ಪ್ರಾಂಶುಪಾಲರ ಬಳಿ ಹೋಗಿ “ನಿನ್ನೆ ಆಕಾಶ್‌ ತಂದೆಗೆ ಹುಶಾರಿರಲಿಲ್ಲ. ರಾತ್ರಿ ಆಸ್ಪತ್ರೆಗೆ ಹೋಗಿದ್ದೆವು, ಬರುವಾಗ ಟೈಯರ್‌ ಸ್ಫೋಟಗೊಂಡು ರಾತ್ರಿಯಿಡಿ ರಸ್ತೆಯಲ್ಲೆ ಕಳೆಯುವಂತಾಯ್ತು. ಓದುವದಕ್ಕೆ ಆಗಲಿಲ್ಲ” ಎಂದರು.

ಪ್ರಾಂಶುಪಾಲರು “ಪರವಾಗಿಲ್ಲ, ನಿಮಗೆ ಇನ್ನು ಮೂರು ದಿನ ಬಿಟ್ಟು ಪರೀಕ್ಷೆ ಮಾಡುತ್ತೇನೆ. ಮೂರು ದಿನ ಸರಿಯಾಗಿ ಓದಿಕೊಳ್ಳಿ” ಎಂದರು.

ಆ ನಾಲ್ವರಿಗೂ ಬಹಳ ಖುಷಿಯಾಗುತ್ತದೆ. ಮೂರು ದಿನ ಸರಿಯಾಗಿ ಓದಿಕೊಂಡು ಪರೀಕ್ಷೆಗೆ ಬಂದರು..

ಅಲ್ಲಿ ಪರೀಕ್ಷೆ ಪ್ರಶ್ನೆ ಪತ್ರಿಕೆ ತೆರೆದವರಿಗೆ ಆಘಾತ ಕಾದಿತ್ತು. ಏಕೆಂದರೆ ಅಲ್ಲಿ ಪ್ರಶ್ನೆಗಳು ಈ ರೀತಿ ಇದ್ದಿದ್ದವು.

1) ನಿಮ್ಮ ಹೆಸರು…. (1 ಅಂಕ)
2) ಮೊನ್ನೆ ತಂದೆಯನ್ನು ಯಾವ ಆಸ್ಪತ್ರೆಗೆ ಕರೆದೊಯ್ದಿದ್ದಿರಿ? (20 ಅಂಕ)
3) ಯಾವ ಸ್ಥಳದಲ್ಲಿ ಟೈಯರ್ ಟೈಯರ್‌ ಸ್ಫೋಟಗೊಂಡಿತ್ತು ಮತ್ತು ಎಲ್ಲಿ? (79 ಅಂಕ)

ಈ ನಾಲ್ವರು ನಾಲ್ಕು ರೀತಿಯ ಉತ್ತರಬರೆದು ಪ್ರಾಂಶುಪಾಲರ ಬಳಿ ಸುಳ್ಳು ಹೇಳಿರುವುದು ಸುಲಭವಾಗಿ ಪತ್ತೆಯಾಯಿತು..

“ಸತ್ಯಕ್ಕಿರುವ ಜಯ ಎಂದಿಗೂ ಸುಳ್ಳಿಗಿಲ್ಲ. ಒಂದಲ್ಲ ಒಂದು ದಿನ ನಿಮ್ಮ ಸುಳ್ಳಿನ ಸೌಧ ನೆಲಸಮ ಆಗೇ ಆಗುತ್ತದೆ. ಕೆಲವೊಮ್ಮೆ ಸುಳ್ಳಿನೊಂದಿಗೆ ನೀವು ಕೂಡ ನೆಲಕ್ಕಚ್ಚಬೇಕಾಗುತ್ತದೆ. ಸುಳ್ಳು ಹೇಳುವಾಗ ಒಮ್ಮೆ ಯೋಚಿಸಿ”

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss