ಒಂದು ದೊಡ್ಡ ಸೆಮಿನಾರ್ ನಡೆಯುತ್ತಿರುತ್ತದೆ. ಅಲ್ಲಿ ಭಾಷಣ ಮಾಡಲು ಬಂದಿದ್ದ ಮುಖ್ಯ ಅತಿಥಿ ಮಾತು ಶುರು ಮಾಡುತ್ತಾರೆ.
ಸ್ವಲ್ಪ ಸಮಯದ ನಂತರ ಕೈಯಿಂದ 2000 ರೂಪಾಯಿಯ ನೋಟನ್ನು ತೆಗೆದು ಸಭಿಕರಲ್ಲಿ ʼಯಾರಿಗೆ ಬೇಕುʼ ಇದು? ಎಂದು ಕೇಳಿದರು. ಬಹುತೇಕ ಎಲ್ಲರೂ ಕೈ ಎತ್ತಿದರು.
ನಾನು ನಿಮಗೆ ಈ ಹಣವನ್ನು ಕೊಡುವ ಮೊದಲು ಒಂದು ಕೆಲಸ ಮಾಡುತ್ತೇನೆ ಎಂದು ಹೇಳಿ ಆ ನೋಟನ್ನು ನೆಲಕ್ಕೆ ಹಾಕಿದರು.
ಮತ್ತೆ ಕೇಳಿದರು “ಯಾರಿಗೆ ಬೇಕು ಈ ಹಣ”? ಎಂದು. ಮತ್ತೆ ಬಹುತೇಕರೆಲ್ಲರೂ ಕೈ ಎತ್ತಿದರು.
ಮತ್ತೆ ಭಾಷಣಕಾರರು ಆ ನೋಟನ್ನು ಅಲ್ಲಿದ್ದ ಕೊಳಕು ಮಣ್ಣಿನ ನೀರಿನಲ್ಲಿ ಅದ್ದಿ ಮುದ್ದೆ ಮಾಡಿದರು. ನೋಟು ಪೂರ್ತಿ ಗಲೀಜಾಯಿತು.
ಮತ್ತೆ ಕೇಳಿದರು “ಹಣ ಯಾರಿಗೆ ಬೇಕೆಂದು”?
ಈಗಲೂ ಬಹುತೇಕರು ಮತ್ತೆ ಕೈ ಮೇಲಕ್ಕೆತ್ತಿದರು.
ಆಗ ಭಾಷಣಕಾರರು ಮಾತು ಮುಂದುವರೆಸಿ ಹೇಳಿದರು. “ನಾನು ನಿಮಗೊಂದು ಬದುಕಿನ ಪಾಠ ಹೇಳಲು ಹೀಗೆ ಮಾಡಿದೆ”..
“ನಾನು ಹಣವನ್ನು ಎಷ್ಟೇ ಕೊಳಕು ಮಾಡಿದರು ಅದು ನಿಮಗೆ ಬೇಕು. ಏಕೆಂದರೆ ಹಣದ ಮೌಲ್ಯ ಯಾವತ್ತಿಗೂ ಕಡಿಮೆ ಆಗುವುದಿಲ್ಲ. ನಮ್ಮ ಜೀವನವೂ ಅಷ್ಟೆ. ಕೆಲವೊಮ್ಮೆ ಎದುರಾಗುವ ಎಷ್ಟೋ ಸೋಲುಗಳು ನಮಗೆ ಬದುಕುವ ಭರವಸೆಯನ್ನೇ ನಾಶಮಾಡುತ್ತದೆ. ಆಗ ನಾನು ಬದುಕಲು ಅನರ್ಹ ಅನ್ನಿಸಲು ಶುರುವಾಗುತ್ತದೆ. ಆದರೆ ನಿಜಕ್ಕೂ ನಾವು ನೋಟಿನಂತೆಯೇ. ಎಂದಿಗೂ ನಮ್ಮ ಮೌಲ್ಯ ಕಡಿಮೆ ಆಗುವುದಿಲ್ಲ. ಏಕೆಂದರೆ ನಾವೆಲ್ಲ ಮೌಲ್ಯಯುತರು. ಯಾರು ಯಾವತ್ತೂ ಮೌಲ್ಯ ಕಳೆದುಕೊಳ್ಳಬೇಡಿ” ಎಂದರು.