Monday, August 8, 2022

Latest Posts

ಪ್ರತೀ ನಡೆ ಹಿಂದೆಯೂ ನೋವಿನ ಕಥೆ ಇರಬಹುದು, ಮಾತನಾಡುವಾಗ ಜೋಪಾನ!

ದಂಪತಿ ಹಾಗೂ 24 ವರ್ಷದ ಮಗ ರೈಲಿನಲ್ಲಿ ಹೋಗುತ್ತಿರುತ್ತಾರೆ. ಮಗ ಕಿಟಕಿ ಪಕ್ಕ ಕುಳಿತಿರುತ್ತಾನೆ. ಹೊರಗಿನ ಪ್ರಕೃತಿ ಸೌಂದರ್ಯ ನೋಡುತ್ತಾನೆ. ಅವನಿಗೆ ಬಹಳ ಆಶ್ಚರ್ಯವಾಗುತ್ತದೆ.

ತನಗಾಗುತ್ತಿರುವಂತ ಅಚ್ಚರಿಗಳನ್ನು ಅಪ್ಪನಲ್ಲಿ ಹೇಳುತ್ತಾನೆ. “ಅಪ್ಪ ನೋಡು ಅಲ್ಲಿ ಮರಗಳು ಹೇಗೆ ಓಡುತ್ತಿವೆ, ಮೋಡಗಳು ನೋಡು ನಾವು ಹೋದಲ್ಲೇ ಬರುತ್ತಿವೆ. ಅಯ್ಯೋ ಮಳೆ ನೋಡು ಎಷ್ಟು ಮೇಲಿನಿಂದ ಬೀಳ್ತಿದೆ. ಅಲ್ಲಿ ದೂರದಲ್ಲಿ ಕಾಣ್ತಿರೋ ಪ್ರಾಣಿಗೆ ನೋಡು ನಾಲ್ಕು ಕಾಲುಗಳಿವೆ” ಎನ್ನುತ್ತಾನೆ.

ಮಗನ ಖುಷಿ ನೋಡಿ ಅಪ್ಪ-ಅಮ್ಮನಿಗೆ ಕಣ್ಣಂಚಲ್ಲಿ ನೀರು ಜಿನುಗುತ್ತದೆ. ಇಬ್ಬರೂ ಮಗನನ್ನು ಅಪ್ಪಿಕೊಂಡು ಮುದ್ದಿಸುತ್ತಾರೆ.

ಇವೆಲ್ಲವನ್ನೂ ನೋಡುತ್ತಾ ಕುಳಿತಿದ್ದ ವೃದ್ಧನಿಗೆ ಬಹಳ ಆಶ್ಚರ್ಯವೆನಿಸುತ್ತದೆ. “ಇಷ್ಟು ದೊಡ್ಡ ಹುಡುಗ ಏಕೆ ಮಕ್ಕಳಂತೆ ಆಡುತ್ತಿದ್ದಾನೆಂದು” ಈತ ಸೀದಾ ದಂಪತಿಯ ಬಳಿ ತೆರಳಿ “ನಿಮ್ಮ ಮಗನನ್ನು ಒಳ್ಳೆಯ ವೈದ್ಯರಲ್ಲಿ ತೋರಿಸಿ” ಎನ್ನುತ್ತಾನೆ.

ಆಗ ದಂಪತಿ ಹೇಳುತ್ತಾರೆ. ” ಹೌದು ಸರ್, ಒಳ್ಳೆ ವೈದ್ಯರಲ್ಲಿ ತೋರಿಸಿಕೊಂಡೆ ಬಂದಿದ್ದೇವೆ. ನನ್ನ ಮಗ ಹುಟ್ಟಿನಿಂದಲೂ ಕುರುಡನಾಗಿದ್ದ. ಇಂದೇ ಇವನಿಗೆ ಕಣ್ಣು ಬಂದಿದ್ದು” ಎನ್ನುತ್ತಾರೆ. ಆಗ ವೃದ್ಧನ ಕಣ್ಣಲ್ಲೂ ನೀರ ನಾವೆ ತೇಲುತ್ತದೆ. ಆ ಹುಡುಗನ ತಲೆ ಸವರಿ ಮನಸ್ಸಿನಲ್ಲಿಯೇ ಕ್ಷಮಿಸುವಂತೆ ಕೇಳಿಕೊಳ್ಳುತ್ತಾನೆ.

ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಒಂದೊಂದು ನೋವಿ ಕಥೆ ಇದ್ದೇ ಇರುತ್ತದೆ. ಅವರ ಕಥೆ ತಿಳಿದುಕೊಳ್ಳದೇ ಅವರ ವ್ಯಕ್ತಿತ್ವವನ್ನು ನಿರ್ಣಯಿಸುವುದು ಶುದ್ಧ ನಾನ್ಸೆನ್ಸ್. ಈ ತಪ್ಪನ್ನು ಎಂದಿಗೂ ಮಾಡಬೇಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss