Thursday, August 18, 2022

Latest Posts

ಕಲಿಕೆ ಎಂದಿಗೂ ನಿರಂತರ, ಅದಕ್ಕೆ ಅಂತ್ಯ ಎನ್ನುವುದಿಲ್ಲ!

ಒಂದು ದಿನ ಗಣಿತ ಕಳಿಸುವ ಶಿಕ್ಷಕರು ತರಗತಿಗೆ ಬರುವಾಗ ದೊಡ್ಡ ಜಗ್ ಹಿಡಿದು ಬರುತ್ತಾರೆ. ಜೊತೆಗೆ ಒಂದಿಷ್ಟು ದೊಡ್ಡ ದೊಡ್ಡ ಕಲ್ಲಿನ ತುಂಡು, ಜಲ್ಲಿ, ಮರಳನ್ನು ಸಹ ತಂದಿರುತ್ತಾರೆ.

ಮೊದಲಿಗೆ ಜಗ್ಗಿನಲ್ಲಿ ಹಿಡಿಯುವಷ್ಟು ದೊಡ್ಡ ದೊಡ್ಡ ಕಲ್ಲನ್ನು ಹಾಕುತ್ತಾರೆ. ನಂತರ ಮಕ್ಕಳಲ್ಲಿ ಕೇಳುತ್ತಾರೆ ” ಜಗ್ಗು ಪೂರ್ತಿ ತುಂಬಿತೇ” ಎಂದು.

ಮಕ್ಕಳೆಲ್ಲ “ಹೌದು” ತುಂಬಿತು ಎನ್ನುತ್ತಾರೆ.

ಆಗ ಮತ್ತೆ ಅದೇ ಜಗ್ಗಿನೊಳಗ್ಗೆ ಜಲ್ಲಿ ಕಲ್ಲುಗಳನ್ನು ಹಾಕುತ್ತಾರೆ. ದೊಡ್ಡ ಕಲ್ಲುಗಳು ಬಿಟ್ಟುಕೊಂಡ ಜಾಗದಲ್ಲಿ ಜಲ್ಲಿಕಲ್ಲು ತುಂಬಿಕೊಳ್ಳುತ್ತದೆ.

ಮತ್ತೆ ಮಕ್ಕಳಲ್ಲಿ ‘ಜಗ್ಗು ಪೂರ್ತಿ ತುಂಬಿತೇ” ಎಂದು ಶಿಕ್ಷಕರು ಕೇಳುತ್ತಾರೆ.

ಮಕ್ಕಳೆಲ್ಲ ಮತ್ತೆ “ಹೌದು” ತುಂಬಿತು ಎನ್ನುತ್ತಾರೆ.

ಆಗ ಮತ್ತೆ ಶಿಕ್ಷಕರು ಅದೇ ಜಗ್ಗಿಗೆ ಮರಳನ್ನು ತುಂಬುತ್ತಾರೆ. ಉಳಿದಿರುವ ಸಣ್ಣ-ಸಣ್ಣ ಜಾಗದಲ್ಲಿ ಮರಳು ಸ್ಥಳ ಆಕ್ರಮಿಸಿಕೊಳ್ಳುತ್ತದೆ.

ಮತ್ತೆ ಮಕ್ಕಳಲ್ಲಿ ‘ಜಗ್ಗು ಪೂರ್ತಿ ತುಂಬಿತೇ” ಎಂದು ಶಿಕ್ಷಕರು ಕೇಳುತ್ತಾರೆ.

ಆಗ ಮಕ್ಕಳೆಲ್ಲ ದೊಡ್ಡ ಧ್ವನಿಯಲ್ಲಿ ‘ಹೌದೆಂದು’ ಉತ್ತರಿಸುತ್ತಾರೆ.

ಬಹಳ ಆಳವಾದ, ದೊಡ್ಡ ದೊಡ್ಡ ವಿಚಾರಗಳನ್ನು ತಿಳಿದುಕೊಂಡಿದ್ದಾರೆಂದ ಮಾತ್ರಕ್ಕೆ ಅವರು ಜ್ಞಾನಿ ಎಂದಲ್ಲ. ದೊಡ್ಡ ವಿಚಾರಗಳನ್ನು ತಿಳಿದಿರುವ ಎಷ್ಟೋ ಜನರಿಗೆ ಚಿಕ್ಕ-ಪುಟ್ಟ ವಿಷಯಗಳು ಗೊತ್ತೆ ಇರುವುದಿಲ್ಲ. ಕಲಿಕೆ ಎಂದಿಗೂ ನಿರಂತರ. ಅದಕ್ಕೆ ಅಂತ್ಯ ಎನ್ನುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!