ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಸೇರಿದಂತೆ ವಿಶ್ವದ ಹಲವು ಕಡೆ ಇನ್ಸ್ಟಾಗ್ರಾಮ್ ಡೌನ್ ಆಗಿದೆ. ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಸಮಸ್ಯೆ ಎದುರಾಗಿದೆ. ವಿಶ್ವದಲ್ಲಿ ಶೇ,81ರಷ್ಟು ಮಂದಿ ಬಳಕೆದಾರರಿಗೆ ತೊಂದರೆಯಾಗಿದೆ.
ಶೇ,15 ರಷ್ಟು ಬಳಕೆದಾರರು ಇನ್ಸ್ಟಾಗ್ರಾಮ್ ವೆಬ್‌ನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಶೇ.5 ರಷ್ಟು ಬಳಕೆದಾರರಿಗೆ ಲಾಗಿನ್ ಕೂಡ ಸಾಧ್ಯವಾಗಿಲ್ಲ.
ಅಮೆರಿಕದಲ್ಲಿ ಎರಡು ಸಾವಿರ ಹಾಗೂ ಭಾರತದಲ್ಲಿ ಒಂದು ಸಾವಿರ ಬಳಕೆದಾರರಿಗೆ ಲಾಗಿನ್ ಸಮಸ್ಯೆಯಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಂ ಅಧಿಕೃತ ಹೇಳಿಕೆ ನೀಡಿಲ್ಲ, ಇನ್ನು ಟ್ವಿಟರ್‌ನಲ್ಲಿ ಇನ್ಸ್ಟಾಗ್ರಾಮ್ ಡೌನ್ ಟ್ರೆಂಡ್ ಆಗಿದೆ.