ಹೊಸದಿಗಂತ ಆನ್ ಲೈನ್ ಡೆಸ್ಕ್:
ಮನೆ, ರಸ್ತೆ, ಹೋಟೆಲ್ ಎಲ್ಲೇ ಇರಲಿ ಕೈನಲ್ಲಿ ಮೊಬೈಲ್ ಇದ್ದರೆ ಅದರಲ್ಲಿ ರೀಲ್ಸ್ ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡೋದು ಎಲ್ಲರಿಗೂ ರೂಢಿಯಾಗಿಬಿಟ್ಟಿದೆ ಅಲ್ವಾ?
ಇಷ್ಟಕ್ಕೂ ನಾನು ಯಾಕೆ ಈ ಇನ್ ಸ್ಟಾಗ್ರಾಂ ಬಗ್ಗೆ ಮಾತಾಡ್ತಿದ್ದೀನಿ ಅಂತ ಗೊತ್ತಾ? ಹೇಳ್ತೀನಿ ಕೇಳಿ..
ಇತ್ತೀಚಿನ ದಿನಗಳಲ್ಲಿ ಈ ಇನ್ ಸ್ಟಾಗ್ರಾಂ ಬಳಕೆ ಹೆಚ್ಚಾಗುತ್ತಿರುವ ನಡುವೆ ಮಹಿಳೆಯರಿಗೆ ತಮ್ಮ ದೇಹದ ಬಗ್ಗೆ ಮುಜುಗರ ಉಂಟಾಗಿದೆ ಅಂತೆ.
ಈ ಬಗ್ಗೆ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಗೆ ಮಾಹಿತಿ ನೀಡಿದ ಫೇಸ್ ಬುಕ್ ನ ಉನ್ನತ ಅಧಿಕಾರಿಗಳು, ಫೋಟೋ-ವಿಡಿಯೋ ಗಳ ಮೂಲಕ ಜನರನ್ನು ಸೆಳೆಯುವ ಇನ್ ಸ್ಟಾಗ್ರಾಂ, ಯುವತಿಯರ ಮಾನಸೀಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಈಗಾಗಲೇ ಸಂಸ್ಥೆಗೆ ಮಾಹಿತಿ ಇತ್ತು ಎಂದಿದ್ದಾರೆ.
2019 ಹಾಗೂ 2020ರಲ್ಲಿ ಫೇಸ್ ಬುಕ್ ನಡೆಸಿದ ಸಮೀಕ್ಷೆಯಲ್ಲಿ ಇನ್ ಸ್ಟಾಗ್ರಾಂ ಬಳಸುವ ಯುವತಿಯರಿಗೆ ಮಾನಸೀಕ ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗುತ್ತಿದ್ದಾರೆ. ವಿಶ್ವದ ಶೇ.32ರಷ್ಟು ಯುವತಿಯರು ಹಾಗೂ ಶೇ. 14ರಷ್ಟು ಯುವಕರಿಗೆ ತಮ್ಮ ದೇಹದ ಬಗ್ಗೆ ಮುಜುಗರ ಉಂಟಾಗುವಂತೆ ಮಾಡಿದೆಯಂತೆ.
ಅಷ್ಟೇ ಅಲ್ಲ ಇನ್ ಸ್ಟಾಗ್ರಾಂ ಬಳಕೆಯಿಂದ ಅಮೆರಿಕದ ಶೇ.6ರಷ್ಟು ಯುವತಿಯರು, ಬ್ರಿಟನ್ ನ ಶೇ.13ರಷ್ಟು ಯುವತಿಯರು ಆತ್ಮಹತ್ಯೆಗೆ ಯತ್ನಿಸಿರುವುದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿದ ಇನ್ ಸ್ಟಾಗ್ರಾಂ ನ ಸಾರ್ವಜನಿಕ ನೀತಿಯ ಮುಖ್ಯಸ್ಥೆ ಕರೀನಾ ನ್ಯೂಟನ್ ಮಾತನಾಡಿದ್ದು, ಇದರಲ್ಲಿ ಯುವಕ ಯುವತಿಯರಿಗೆ ಇನ್ ಸ್ಟಾಗ್ರಾಂ ನಿಂದ ಅನುಭವಿಸುತ್ತಿದ್ದ ಆತಂಕ ಹಾಗೂ ಖಿನ್ನತೆಗೆ ಪರಿಹಾರ ಹುಡುಕುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು