ಮಾಡೆಲ್ ಆಗೋ ಬದಲು ಪೊಲೀಸ್ ಆಗಿಯೇ ಇರ‍್ತೀನಿ, ವಿಶ್ವ ಪೊಲೀಸ್ ಸುಂದರಿ ಮಾತಿದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಳ್ಳೆ ಉದ್ದ ಹಾಗೂ ಪರ್ಸನಾಲಿಟಿ ಇರುವ ಹುಡುಗಿಯರನ್ನು ಯಾರೇ ನೋಡಿದರೂ ಇವರು ಮಾಡೆಲ್ ಆಗಿರಬಹುದಿತ್ತು ಎನ್ನುವ ಮಾತು ಬಂದೇ ಬರುತ್ತದೆ. ಅಂತೆಯೇ ಇಲ್ಲಿರುವ ಪೊಲೀಸ್ ಅಧಿಕಾರಿಗೂ ಮಾಡೆಲ್ ಆಗುವ ಹಲವು ಅವಕಾಶ ಬಂದರೂ ಪೊಲೀಸ್ ಹುದ್ದೆ ತೊರೆಯೋದಕ್ಕೆ ಅವರು ತಯಾರಿಲ್ಲ.

ಕೊಲಂಬಿಯಾದ ಮೆಡೆಲಿನ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಡಯಾನಾ ರೆಮಿರೇಝ್ ನೋಡೋಕೆ ಸುಂದರವಾಗಿದ್ದಾರೆ. ಅತೀ ಸುಂದರ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದಾರೆ. ಜನರೆಲ್ಲ ಇವರಿಗೆ ಮಾಡೆಲ್ ಆಗಿ ಎಂದಿದ್ದಾರೆ. ಮಾಡೆಲ್ ಆಗುವ ಅವಕಾಶಗಳು ಬಂದರೂ ಡಯಾನಾ ರಿಜೆಕ್ಟ್ ಮಾಡಿದ್ದಾರೆ.

ಮಾಡೆಲಿಂಗ್ ಮಾಡುವುದಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತೇನೆ. ಮಾಡೆಲ್ ಆಗಿ ಪ್ರಬಾವಿ ವ್ಯಕ್ತಿ ಎನಿಸಿಕೊಳ್ಳುವ ಆಸೆ ಇಲ್ಲ, ಅದಕ್ಕಾಗಿ ವೃತ್ತಿ ತೊರೆಯೋದಿಲ್ಲ ಎಂದು ಡಯಾನಾ ಹೇಳಿದ್ದಾರೆ.

ಇನ್ನೊಂದು ಜನ್ಮ ಇದ್ದರೂ ಅದರಲ್ಲಿಯೂ ಪೊಲೀಸ್ ಆಗುತ್ತೇನೆ, ನಾನು ಇಂದು ಏನಾಗಿದ್ದೇನೋ ಎಲ್ಲದಕ್ಕೂ ಪೊಲೀಸ್ ಇಲಾಖೆಯೇ ಕಾರಣ ಎಂದಿದ್ದಾರೆ. ಡಯಾನಾ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!