Sunday, August 14, 2022

Latest Posts

ಡಾಕ್ಯುಮೆಂಟರಿ ಪೋಸ್ಟರ್‌ನಲ್ಲಿ ಹಿಂದು ದೇವತೆಗೆ ಅಪಮಾನ: ನೆಟ್ಟಿಗರ ಆಕ್ರೋಶಕ್ಕೆ ಸ್ಪಷ್ಟನೆ ನೀಡಿದ ನಿರ್ದೇಶಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಡಾಕ್ಯುಮೆಂಟರಿ ಚಲನ ಚಿತ್ರದ ಪೋಸ್ಟರ್‌ ಒಂದರಲ್ಲಿ ಹಿಂದು ದೇವತೆಗಳಿಗೆ ಅಪಮಾನವಾಗಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶಿಸಿದ ಸಾಕ್ಷ್ಯಚಿತ್ರದ ಪೋಸ್ಟರ್ನಲ್ಲಿ ಕಾಳಿ ದೇವಿಯ ಚಿತ್ರಣದೊಂದಿಗೆ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಆಕ್ರೋಶವನ್ನು ಹುಟ್ಟುಹಾಕಿದೆ.

ಅಗಾ ಖಾನ್ ಮ್ಯೂಸಿಯಂನಲ್ಲಿ ರಿದಮ್ಸ್ ಆಫ್ ಕೆನಡಾದ ಭಾಗವಾಗಿ ತಮ್ಮ ಮುಂಬರುವ ಸಾಕ್ಷ್ಯ ಚಿತ್ರದ ಪೋಸ್ಟರ್‌ ಒಂದನ್ನು ನಿರ್ದೇಶಕಿ ಮಣಿಮೇಕಲೈ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ ನಲ್ಲಿ ಮಹಿಳೆಯೊಬ್ಬರಿಗೆ ಮಹಾಕಾಳಿಯ ವೇಷಹಾಕಲಾಗಿದೆ. ಫೋಟೋದಲ್ಲಿ ಮಹಾಕಾಳಿ ವೇಷದಲ್ಲಿರುವ ಮಹಿಳೆ ಸಿಗರೇಟು ಸೇದುತ್ತಿರುವುದನ್ನು ಚಿತ್ರಿಸಲಾಗಿದೆ. ಅಲ್ಲದೇ ಎಲ್‌ಜಿಬಿಟಿ (ಸಲಿಂಗಿ,ತೃತೀಯಲಿಂಗಿ, ಉಭಯಲಿಂಗಿ) ಸಮುದಾಯದ ಧ್ವಜವನ್ನೂ ತೋರಿಸಲಾಗಿದೆ.

ಇದರಿಂದ ಹಿಂದೂ ಸಮುದಾಯದವರ ಭಾವನೆಗೆ ಘಾಸಿಯಾಗಿದ್ದು ನೆಟ್ಟಿಗರು ಭಾರೀ ಪ್ರಮಾಣದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದೇವಿಯ ಚಿತ್ರಣದ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಚಿತ್ರ ನಿರ್ಮಾಪಕರ ಬಗ್ಗೆ ಬಳಕೆದಾರರು ದೂರು ನೀಡಿದ್ದು, ಪೋಸ್ಟರ್ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ‘ಅರೆಸ್ಟ್ ಲೀನಾಮಣಿಮೇಕಲೈ’ ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಇನ್ನು ಈ ಕುರಿತು ನಿರ್ದೇಶಕಿ ಮೀನಾಮಣಿಮೇಕಲೈ ದ್ವೇಷಕ್ಕಿಂತ ಪ್ರೀತಿ’ ಆಯ್ಕೆ ಮಾಡಲು ಜನರನ್ನು ಕೇಳಿಕೊಂಡಿದ್ದು ಚಿತ್ರದ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯ’ ಕೆನಡಾವು ವಿವಿಧ ಸಂಸ್ಕೃತಿಯ ಕುರಿತು ಚಲನಚಿತ್ರಗಳನ್ನು ನಿರ್ಮಿಸಿ ಶಿಬಿರದಲ್ಲಿ ಭಾಗವಹಿಸಲು ಕೆನಡಾದಾದ್ಯಂತದ ಕೆಲವು ಅತ್ಯುತ್ತಮ ಚಲನಚಿತ್ರ ವಿದ್ಯಾರ್ಥಿಗಳನ್ನು ಆಹ್ವಾನಿಸಿತು. ಆ ಶಿಬಿರದಲ್ಲಿ ನಾನು ಭಾಗವಹಿಸಿದ್ದು ‘ಕಲಿ’ ಎಂಬ ಹೆಸರಿನ ಚಿತ್ರ ತಯಾರಿಸಲಾಗಿದೆ” ಎಂದಿದ್ದಾರೆ.

ಅಲ್ಲದೇ ಕಾಳಿಯನ್ನು ತೋರಿಸಿರುವ ಕುರಿತು ಸ್ಪಷ್ಟನೆ ನೀಡಿರುವ ಅವರು “ಇದರಲ್ಲಿ ನಾನು ನಟಿಸಿದ್ದೇನೆ, ನಿರ್ದೇಶನ ಮಾಡಿದ್ದೇನೆ ಮತ್ತು ನಿರ್ಮಿಸಿದ್ದೇನೆ. ಒಂದು ಸಂಜೆ ಕಾಳಿ ಕಾಣಿಸಿಕೊಂಡು ಟೊರೊಂಟೊದ ಬೀದಿಗಳಲ್ಲಿ ಅಡ್ಡಾಡುವ ಘಟನೆಗಳ ಸುತ್ತ ಚಲನಚಿತ್ರವು ಸುತ್ತುತ್ತದೆ. ನೀವು ಚಿತ್ರವನ್ನು ನೋಡಿದರೆ ಹಲವಾರು ಜನಾಂಗೀಯ ಭಿನ್ನಾಭಿಪ್ರಾಯಗಳ ನಡುವೆ ದ್ವೇಷದ ಬದಲು ಪ್ರೀತಿಯನ್ನು ಆರಿಸಿಕೊಳ್ಳುವ ಬಗ್ಗೆ ಈ ಕಾಳಿ ಮಾತನಾಡುತ್ತಾಳೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಆಗ ನೀವು ಅರೆಸ್ಟ್ ಲೀನಾಮಣಿಮೇಕಲೈ ಬದಲಿಗೆ ನನ್ನೆಡೆಗೆ ಪ್ರೀತಿಯನ್ನು ತೋರಿಸುತ್ತೀರಿ” ಎಂದು ಸ್ಪಷ್ಟನೆ ನೀಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss