ವಿಮೆ ಸಮಸ್ಯೆ: ದೆಹಲಿ-ಮಾಸ್ಕೋ ವಿಮಾನ ರದ್ದು ಮಾಡಿದ ಏರ್ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉಕ್ರೇನ್‌ನ- ರಷ್ಯಾದ ನಡುವಿನ ಕದನದಿಂದಾಗಿ ರಷ್ಯಾ ವಾಯು ಪ್ರದೇಶದಲ್ಲಿ ವಿಮಾನಗಳ ವಿಮೆ ಮಾನ್ಯಗೊಳ್ಳದ ಕಾರಣದಿಂದ ಏರ್ ಇಂಡಿಯಾದೆಹಲಿಯಿಂದ ಮಾಸ್ಕೋಗೆ ವಾರಕ್ಕೆ ಎರಡು ಬಾರಿ ಇದ್ದ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ.
ಎಲ್ಲಾ ಏರ್ ಇಂಡಿಯಾ ವಿಮಾನಗಳು ಅಂತಾರಾಷ್ಟ್ರೀಯ ಏಜೆನ್ಸಿಗಳಿಂದ ವಿಮೆ ಮಾಡಲ್ಪಟ್ಟಿದೆ.
ಈ ಕುರಿತು ರಷ್ಯಾದ ರಾಯಭಾರ ಕಚೇರಿಯು ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿಕೆ ನೀಡಿದ್ದು, ಆತ್ಮೀಯ ನಾಗರಿಕರೇ, ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದೆಹಲಿ-ಮಾಸ್ಕೋ-ದೆಹಲಿ ಮಾರ್ಗದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದೆ ಎಂದು ನಾವು ನಿಮ್ಮ ಗಮನಕ್ಕೆ ತರುತ್ತಿದ್ದೇವೆ. ಅದೇ ರೀತಿ ರಷ್ಯಾಕ್ಕೆ ವಿಮಾನಯಾನವನ್ನು ಪುನರಾರಂಭಿಸುವ ನಿರೀಕ್ಷೆಗಳು ಸದ್ಯಕ್ಕೆ ಅನಿಶ್ಚಿತ. ಹಾಗಾಗಿ ಏರ್ ಇಂಡಿಯಾ ಕಚೇರಿಯ ಪ್ರಕಾರ ಪ್ರಯಾಣಿಕರು ರದ್ದುಗೊಂಡ ವಿಮಾನಗಳ ಟಿಕೆಟ್ ಸಂಪೂರ್ಣ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದೆ.
ರಷ್ಯಾ ತನ್ನ ವಾಯುಯಾನ ವಲಯವನ್ನು ಗುರಿಯಾಗಿಸಿಕೊಂಡು ಉಕ್ರೇನ್ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಯುರೋಪಿಯನ್ ಒಕ್ಕೂಟದ ಎಲ್ಲಾ 27 ಸದಸ್ಯರುಸಹಿತ 36 ದೇಶಗಳ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ಮುಚ್ಚಿದೆ.
ರಷ್ಯಾದ ಆಕಾಶದಲ್ಲಿ ವಿಮೆ ಮಾನ್ಯವಾಗಿರುವುದಿಲ್ಲ ಎಂಬ ಭಯದಿಂದಾಗಿ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!