ಇಂಟೆಲ್ ಸಹ-ಸಂಸ್ಥಾಪಕ ಗಾರ್ಡನ್ ಮೂರ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಮೆರಿಕದ ಬಹುರಾಷ್ಟ್ರೀಯ ನಿಗಮ ಮತ್ತು ತಂತ್ರಜ್ಞಾನ ಕಂಪನಿ ಇಂಟೆಲ್ ಕಾರ್ಪೊರೇಶನ್‌ನ ಸಹ-ಸಂಸ್ಥಾಪಕ ಗೋರ್ಡನ್ ಇ ಮೂರ್ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರ ಸಾವು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರವಾದ ನಷ್ಟವನ್ನುಂಟು ಮಾಡಿದೆ.

1960ರ ದಶಕದಲ್ಲಿ ಕಂಪ್ಯೂಟರ್ ಚಿಪ್ ತಂತ್ರಜ್ಞಾನದ ಘಾತೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಮೂರ್ ಅವರ ದೂರದೃಷ್ಟಿಯು ಹೈಟೆಕ್ ಯುಗಕ್ಕೆ ವೇದಿಕೆಯನ್ನು ಸ್ಥಾಪಿಸಿತು.

ಮೂರ್ ಯಾವಾಗಲೂ ತಮ್ಮನ್ನು ತಾವು ‘ಆಕಸ್ಮಿಕ ಉದ್ಯಮಿ’ ಎಂದು ಕರೆದುಕೊಳ್ಳುತ್ತಿದ್ದರು. ಏಕೆಂದರೆ ಅವರು ಯಾವಾಗಲೂ ಶಿಕ್ಷಕರಾಗಲು ಬಯಸಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ಉದಯೋನ್ಮುಖ ಮೈಕ್ರೋಚಿಪ್ ಉದ್ಯಮದಲ್ಲಿ ಎಲೆಕ್ಟ್ರಾನಿಕ್ಸ್ ಅನ್ನು ವಿಶ್ವದ ಅತಿದೊಡ್ಡ ಉದ್ಯಮಗಳಲ್ಲಿ ಒಂದನ್ನಾಗಿ ಮಾಡಲು ಸಹಾಯ ಮಾಡಿದರು, ನಂತರ ಬಿಲಿಯನೇರ್ ಆದರು.

ಮೂರ್ ಮತ್ತು ಅವರ ದೀರ್ಘಕಾಲದ ಸಹೋದ್ಯೋಗಿ ರಾಬರ್ಟ್ ನೋಯ್ಸ್ ಜುಲೈ 1968 ರಲ್ಲಿ ಇಂಟೆಲ್ ಅನ್ನು ಸ್ಥಾಪಿಸಿದರು. 1975 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಮೂರ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದರು. 1979 ರಲ್ಲಿ ಮಂಡಳಿಯ ಅಧ್ಯಕ್ಷ ಮತ್ತು CEO ಆಗಿ ನೇಮಕಗೊಂಡರು, 1987 ರ ವರೆಗೆ ಸಿಇಒ ಪಾತ್ರಕ್ಕೆ ರಾಜೀನಾಮೆ ನೀಡುವವರೆಗೂ ಅವರು ಕಾರ್ಯ ನಿರ್ವಹಿಸಿದರು.

1990 ರ ಹೊತ್ತಿಗೆ ಇಂಟೆಲ್ ಜಾಗತಿಕವಾಗಿ ಉತ್ಪಾದಿಸಲಾದ 80 ಪ್ರತಿಶತ ಕಂಪ್ಯೂಟರ್‌ಗಳಲ್ಲಿ ಮೈಕ್ರೊಪ್ರೊಸೆಸರ್‌ಗಳನ್ನು ಹೊಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!