ಶಿವಮೊಗ್ಗದಲ್ಲಿ ಡಿ.26 ರಿಂದ ಬಾಲಕಿಯರ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿ

ಹೊಸದಿಗಂತ ವರದಿ, ಶಿವಮೊಗ್ಗ:
ದೇಶಿಯ ಕ್ರಿಕೆಟ್ ನಲ್ಲಿ ಮಹಿಳೆಯರಿಗೆ ಉತ್ತೇಜಿಸುವ ಸಲುವಾಗಿ ಇದೇ ಮೊದಲಬಾರಿಗೆ 15 ವರ್ಷದೊಳಗಿನ ಬಾಲಕಿಯರ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಯನ್ನು ನಗರದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಡಿ.26 ರಿಂದ ಜನವರಿ 3 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ವಲಯ ಸಂಚಾಲಕ ಸದಾನಂದ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾವಳಿಗಳು ರಾಜ್ಯದಲ್ಲಿ 6 ಕಡೆ ನಡೆಯಲಿವೆ. ಇಲ್ಲಿ ಕೆಎಸ್ ಸಿಎ ನ ಎರಡು ಮೈದಾನದಲ್ಲಿ ಮತ್ತು ಜೆಎನ್ಎನ್ ಸಿಇ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದರು.
ವಿವಿಧ ರಾಜ್ಯಗಳ 36 ತಂಡಗಳು ಈ ಪಂದ್ಯಾವಳಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಪಾಲ್ಗೊಳ್ಳಲಿವೆ. ಇವುಗಳನ್ನ 6 ತಂಡಗಳನ್ನಾಗಿ ಮಾಡಡಿ ಆಡಿಸಲಾಗುತ್ತಿದೆ. ಎ,ಬಿ,ಸಿ, ಡಿ ಎಂದು ಗುಂಪುಗಳಾಗಿ ಆಡಲಿದ್ದು, ಇವುಗಳಲ್ಲಿ ಎ ಗುಂಪಿನ 6 ತಂಡಗಳ ಪಂದ್ಯಾವಳಿ ಗಳು ನವುಲೆಯ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಜೆಎನ್ ಎನ್ ಸಿ ಇ ಅಂಕಣದಲ್ಲಿ ನಡೆಯಲಿದ ಎಂದು ತಿಳಿಸಿದರು.
ಎ ಗುಂಪಿನಲ್ಲಿ ಪಶ್ಚಿಮ ಬಂಗಾಳ, ತಮಿಳು ನಾಡು, ಉತ್ತರಖಂಡ, ವಿದರ್ಭ, ಹಿಮಾಚಲ ಪ್ರದೇಶ ಮತ್ತು ತ್ರಿಪುರದ ತಂಡಗಳು ಶಿವಮೊಗ್ಗದಲ್ಲಿ ಆಡಲಿವೆ. 35 ಒವರ್ ಗಳ ಏಕದಿನ ಪಂದ್ಯ ಇದಾಗಿದೆ. ಡಿ.26 ರಂದು ಬೆಳಿಗ್ಗೆ 9 ಗಂಟೆಗೆ ಡಿಸಿ ಡಾ.ಸೆಲ್ವಮಣಿ ಎಸ್ಪಿ ಮಿಥುನ್ ಕುಮಾರ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!