ಚಿನ್ನದ ಆಭರಣಗಳು ಯಾರಿಗೆ ಇಷ್ಟ ಇಲ್ಲ ಹೇಳಿ. ಚಿನ್ನವು ಸಮೃದ್ಧಿಯ ಸಂಕೇತವಾಗಿದೆ.
ನಮ್ಮ ದಿನನಿತ್ಯದ ಜೀವನದಲ್ಲೂ ಚಿನ್ನಾಭರಣ ಧರಿಸುವ ಟ್ರೆಂಡ್ ಇದೆ. ಆದರೆ ನೀವು ಯಾವತ್ತಾದರೂ ಯೋಚಿಸಿದ್ದೀರಾ ಕಾಲಿಗೆ ಚಿನ್ನದ ಆಭರಣ ಯಾಕೆ ಹಾಕ್ಬಾರ್ದು ಅಂತ.
ಚಿನ್ನದಲ್ಲಿ ಶಾಖ ಮತ್ತು ವಿದ್ಯುತ್ ಪ್ರವಹಿಸುತ್ತದೆ. ಪಾದಗಳಿಗೆ ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ಶಕ್ತಿಯ ಹರಿವು ಅಡ್ಡಿಯಾಗುತ್ತದೆ. ಪಾದಗಳ ಉಷ್ಣತೆಯು ಹೆಚ್ಚಾಗುವ ಸಾಧ್ಯತೆಯೂ ಇದೆ. ಇದು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡಬಹುದು.
ಜೊತೆಗೆ ಚಿನ್ನವು ಮೃದುವಾದ ಲೋಹವಾಗಿದೆ. ಪಾದಗಳ ಮೇಲೆ ನಿರಂತರ ಘರ್ಷಣೆಯು ಅದರ ಗುಣಮಟ್ಟವನ್ನು ಹಾನಿಗೊಳಿಸುತ್ತದೆ. ಇದಕ್ಕಾಗಿಯೇ ಪಾದಗಳಿಗೆ ಬೆಳ್ಳಿಯ ಆಭರಣಗಳನ್ನು ಧರಿಸಲಾಗುತ್ತದೆ.
ಬೆಳ್ಳಿ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ದೇಹವನ್ನು ತಂಪಾಗಿಡುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಸಹಕಾರಿ ಹಾಗೂ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.