spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ: ಬದುಕು ಸಾಗಲು ಹಳೆ ಬೇರು, ಹೊಸ ಚಿಗುರು ಎರಡೂ ಬೇಕು!

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

‘ವಯಸ್ಸಾಯಿತು’ ಎಂದರೆ ಅವರ ಬಳಿ ಅನುಭವಗಳ ದೊಡ್ಡ ಖಜಾನೆಯೇ ಇದೆ ಎಂದರ್ಥ.
ಬದುಕು ನಡೆಯಲು ಹಳೆ ಬೇರು, ಹೊಸ ಚಿಗುರು ಎರಡೂ ಬೇಕು. ಇಂದು ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ. 2020-2030 ದಶಕವನ್ನು ‘ಹಿರಿಯರ ದಶಕ’ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಈ ತಿಂಗಳನ್ನು ‘ಹಿರಿಯ ನಾಗರಿಕರ ತಿಂಗಳು’ ಎಂದೇ ಘೋಷಿಸಲಾಗಿದೆ.
ಹಿರಿಯರನ್ನು ಮನೆಗೆ ‘ಭಾರ’ ಎಂದುಕೊಳ್ಳುವ ಹಲವು ‘ಮಕ್ಕಳಿದ್ದಾರೆ, ಮೊಮ್ಮಕ್ಕಳಿದ್ದಾರೆ’. ವಯಸ್ಸಾಗುತ್ತಾ ಅವರು ಮಕ್ಕಳಂತೆ ಆಗುತ್ತಾರೆ. ನೀವು ಮಕ್ಕಳಿದ್ದಾಗ ನಿಮ್ಮ ಎಲ್ಲ ಪ್ರಶ್ನೆಗೂ ಉತ್ತರಿಸಿ, ಮನಸ್ಸಿಗೆ ಮಾಡಿದ ನೋವುಗಳನ್ನು ಸಹಿಸಿದ ಅವರ ಖುಣ ತೀರಿಸಲು ನಿಮಗಿದು ಪುಟ್ಟ ಅವಕಾಶ.
ಹಿರಿಯರನ್ನು ಖುಷಿಯಾಗಿ ನೋಡಿಕೊಳ್ಳುವುದು ಹೇಗೆ?

  • ಅವರು ನಿಮ್ಮಿಂದ ದೂರ ಇದ್ದರೆ ಆಗಾಗ ಅವರನ್ನು ಭೇಟಿ ಮಾಡಿ, ನಿಮ್ಮನ್ನು ನೋಡುವ ಖುಷಿ ಮುಂದೆ ಇನ್ಯಾವುದೂ ಇಲ್ಲ.
  • ಅವರನ್ನು ಆಗಾಗ ವೈದ್ಯರ ಬಳಿ ಕರೆದುಕೊಂಡು ಹೋಗಿ. ಅವರು ಯಾವ ಮಾತ್ರೆ ಕುಡಿಯುತ್ತಾರೆ? ಎಷ್ಟು ಹೊತ್ತಿಗೆ ಕುಡಿಯುತ್ತಾರೆ? ಗಮನ ಇರಲಿ.
  • ನೀವು ಅವರ ಜೊತೆಯಲ್ಲೇ ಇದ್ದು ನೋಡಿಕೊಳ್ಳಲು ಆಗದಿದ್ದರೆ, ಬೇರೆಯವರ ಸಹಾಯ ಪಡೆಯಿರಿ.
  • ಅವರಿಗೆ ಬೇಕಾದ ರೀತಿಯಲ್ಲಿ ಮನೆಯನ್ನು ರೀ ಡಿಸೈನ್ ಮಾಡಿ.
  • ಮನೆಯಲ್ಲಿ ವಯಸ್ಸಾದ ಅಪ್ಪ-ಅಮ್ಮ ಇಬ್ಬರೇ ಇರುತ್ತಾರೆ ಎಂದರೆ ಆ ಮನೆಯಲ್ಲಿ ನಡೆಯಬಹುದಾದ ಅನಾಹುತಗಳನ್ನು ಗಮನದಲ್ಲಿಟ್ಟು, ಅದಕ್ಕೆ ಬಂದೋಬಸ್ತ್ ಮಾಡಿ.
  • ಅವರ ಆರ್ಥಿಕ ಸ್ಥಿತಿ ಬಗ್ಗೆ ಮುಕ್ತವಾಗಿ ಮಾತನಾಡಿ, ಸಹಾಯ ಬೇಕಿದ್ದರೆ ಸಹಾಯ ಮಾಡಿ.
  • ಪೇಪರ್‌ವರ್ಕ್‌ಗಳ ಬಗ್ಗೆ ನೀವು ಗಮನ ಕೊಡಿ.
  • ಡ್ರೈವಿಂಗ್ ಸರಿಯಾಗಿ ಮಾಡುತ್ತಾರಾ ಎನ್ನುವ ಬಗ್ಗೆ ಗಮನ ಇರಲಿ.
  • ಅವರನ್ನು ಆಕ್ಟೀವ್ ಆಗಿಡಿ,ಸ್ನೇಹಿತರ ಜೊತೆ ಸುತ್ತಾಡಲು ಕಳುಹಿಸಿ.
  • ಆರೋಗ್ಯಕರ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳಿ.
  • ಎಷ್ಟೇ ದೂರ ಇರಲಿ ಅಥವಾ ಪಕ್ಕದಲ್ಲೇ ಇರಲಿ. ಅವರ ಮೇಲೆ ಒಂದು ಕಣ್ಣಿರಲಿ.
  • ಅವರು ಕೇಳುವ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಿ. ವಾರಕ್ಕೆ ಒಂದು ದಿನವಾದರೂ ಅವರ ಜೊತೆ ಸಮಯ ಕಳೆಯಿರಿ.
  • ಅವರ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನು ಆಡಬೇಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss