ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………
ಹೊಸ ದಿಗಂತ ವರದಿ, ಭಟ್ಕಳ:
ಅಂತಾರಾಷ್ಟ್ರೀಯ ದೂರವಾಣಿ ಕರೆಗಳ ಪರಿವರ್ತನೆ ಮೂಲಕ ದೂರ ಸಂಪರ್ಕ ಇಲಾಖೆಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ
ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಓರ್ವ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನವಾಯತ್ ಕಾಲನಿಯ ತಕೀಯಾ ಸ್ಟ್ರೀಟ್ ನಿವಾಸಿ ನಿಸಾರ್ ಮಹ್ಮದ್ ಬಂಧಿತ ಆರೋಪಿಯಾಗಿದ್ದು ಈತ ಇನ್ನೂ ಕೆಲವರೊಂದಿಗೆ ಸೇರಿ ಬೆಂಗಳೂರಿನ ಬಿ.ಟಿ.ಎಂ ಲೇ ಔಟ್ ನಲ್ಲಿ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಈ ಜಾಲವನ್ನು ಭೇದಿಸಿದ ಪೊಲೀಸರು ಬೆಂಗಳೂರಿನಲ್ಲಿ ಇಬ್ರಾಹಿಮ್ ಮತ್ತು ಗೌತಮ್ ಎನ್ನುವವರನ್ನು ವಶಕ್ಕೆ ಪಡೆದ ಬಳಿಕ ನಿಸಾರ್ ಭಟ್ಕಳಕ್ಕೆ ಬಂದು ನೆಲೆಸಿದ್ದ ಆರೋಪಿ ಒಂದೇ ಬಾರಿ 32 ಸಿಮ್ ಕಾರ್ಡ್ ಬಳಸುವ ಉಪಕರಣ ಹೊಂದಿದ್ದಾನೆ.
ವಿವಿಧ ರಾಜ್ಯಗಳಿಂದ ಸಿಮ್ ಕಾರ್ಡ್ ಪಡೆದು ಅವುಗಳನ್ನು ಬಳಸಿ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಆರೋಪಿಗಳು ಪರಿವರ್ತಿಸುತ್ತಿದ್ದರು.
ಇವರಿಗೆ ಸಿಮ್ ಪೂರೈಸುತ್ತಿದ್ದ ತಮಿಳುನಾಡು ಮೂಲದ ನಾಲ್ವರನ್ನು ಸಹ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.
ದುಬೈ ಮತ್ತು ಪಾಕಿಸ್ತಾನಗಳಿಂದ ಬಂದಿರುವ ಅಂತರಾಷ್ಟ್ರೀಯ ಕರೆಗಳನ್ನು ಸಹ ಆರೋಪಿತರು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿರುವ ಸಾಧ್ಯತೆಗಳಿದ್ದು
ಇವರು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆಯೇ? ಎನ್ನುವ ಕುರಿತು ತೀವ್ರ ವಿಚಾರಣೆ ನಡೆಯುವ ಸಾಧ್ಯತೆ ಇದೆ.