ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಬಾ ಆಸೆಯಿಂದ ಚೈತ್ರ ನವರಾತ್ರಿ ಪೂಜೆ ಆಚರಣೆ ಮಾಡಬೇಕು ಎಂದಿದ್ದ ಮಹಿಳೆಗೆ ಪೂಜೆಯ ದಿನದಂದು ಪಿರಿಯಡ್ಸ್ ಬಂದಿದೆ. ಈ ಕಾರಣದಿಂದ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಚೈತ್ರ ನವರಾತ್ರಿಯಂದು ಮಹಿಳೆ ಮುಟ್ಟಾಗಿದ್ದ ಕಾರಣ ಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ, ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. 36 ವರ್ಷದ ಪ್ರಿಯಾಂಶ ಸೋನಿ ಎಂ ಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಿಯಾಂಶ ಸೋನಿ ತನ್ನ ಪತಿ ಮುಖೇಶ್ ಸೋನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಮೂರುವರೆ ವರ್ಷದ ಜಾನ್ವಿ ಮತ್ತು ಎರಡೂವರೆ ವರ್ಷದ ಮಾನ್ವಿ ಜೊತೆ ವಾಸವಾಗಿದ್ದರು. ಮುಖೇಶ್ ಹೇಳುವ ಪ್ರಕಾರ ಪ್ರಿಯಾಂಶ ಚೈತ್ರ ನವರಾತ್ರಿಗೆ ಉತ್ಸಾಹದಿಂದ ತಯಾರಿ ನಡೆಸಿದ್ದರು. ಮೊದಲ ದಿನವೇ ಆಕೆಗೆ ಮುಟ್ಟು ಕಾಣಿಸಿಕೊಂಡಿತ್ತು. ಉಪವಾಸ, ಪೂಜೆ ಎರಡನ್ನೂ ಮಾಡಲು ಸಾಧ್ಯವಾಗಲಿಲ್ಲ. ಆಕೆ ಭಾವನಾತ್ಮಕವಾಗಿ ಕುಗ್ಗಿ ಹೋದಳು. ಮುಖೇಶ್ ಅವಳನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ, ಅವಳು ಸಮಾಧಾನಗೊಳ್ಳಲು ಸಾಧ್ಯವಾಗಲಿಲ್ಲ.