spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನ್‌ಮುಲ್ ಹಗರಣದ ತನಿಖೆ ತಡವಾಗುತ್ತಿಲ್ಲ, ವರದಿ ಬಂದ ನಂತರ ಶೀಘ್ರ ಕ್ರಮ: ಸಚಿವ ಸೋಮಶೇಖರ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಮಂಡ್ಯ:

ಮಂಡ್ಯ: ಮನ್‌ಮುಲ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ತಡವಾಗುತ್ತಿಲ್ಲ. ವ್ಯವಸ್ಥಿತವಾಗಿಯೇ ವಿಚಾರಣೆ ನಡೆಯುತ್ತಿದೆ. ಪ್ರಾಥಮಿಕವಾಗಿ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಹಕಾರ ಇಲಾಖೆಯಿಂದಲೂ ತನಿಖೆ ನಡೆಯುತ್ತಿದ್ದುಘಿ, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಕಚೇರಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನ್‌ಮುಲ್‌ನಲ್ಲಿ ಎಷ್ಟು ವರ್ಷದಿಂದ ಹಗರಣ ನಡೆದಿದೆ ಎಂಬುದನ್ನು ತಿಳಿಯಬೇಕು. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಎಷ್ಟೇ ಪ್ರಭಾವಿತರಿದ್ದರೂ ತಪ್ಪು ಮಾಡಿದ್ದರೆ ಶಿಕ್ಷೆಗೆ ಒಳಪಡಿಸಲು ಸಿಎಂ ಸೂಚಿಸಿದ್ದಾರೆ. ರೈತರ ಸಂಸ್ಥೆಗೆ ಅನ್ಯಾಯವಾಗಬಾರದು. ಸಹಕಾರ ಇಲಾಖೆ ವರದಿಯಲ್ಲಿ ಎಷ್ಟು ಕೋಟಿ ರೂ ನಷ್ಟ ಆಗಿದೆ. ಕಾರಣ ಯಾರು, ಯಾರಿಂದ ವಸೂಲಿ ಮಾಡಬೇಕು ಎಂದು ಮಾಹಿತಿ ಇರಲಿದೆ. ಇದಾದ ಬಳಿಕ ಉನ್ನತ ಮಟ್ಟದ ತನಿಖೆಗೆ ಸೂಚಿಸಲಾಗುವುದು ಎಂದರು.
ಪೊಲೀಸ್ ಇಲಾಖೆಗೂ ಕಟ್ಟುನಿಟ್ಟಿನ ಆದೇಶ ಇದೆ. ಶೀಘ್ರ ಆರೋಪಿಗಳ ಬಂಧನವಾಗಲಿದೆ. ರೈತರು ಕಷ್ಟಪಟ್ಟು ಹಾಲು ಹಾಕುತ್ತಾರೆ. ಇವರು ಅದಕ್ಕೆ ನೀರು ಬೆರಸಿ ಮೋಸ ಮಾಡಿದರೆ ಸರ್ಕಾರ ಸುಮ್ಮನಿರಲ್ಲ. ವರದಿ ಬಂದ ಬಳಿಕ ಆಡಳಿತ ಮಂಡಳಿ ಕೈವಾಡ ಇದ್ದರೆ ಸೂಪರ್‌ಸೀಡ್ ಚಿಂತನೆ ಮಾಡಬಹುದು. ಬೆಂಗಳೂರಿನಲ್ಲಿ ಇದೇ ರೀತಿ ಹಗರಣ ನಡೆದಿದೆ ಎಂಬ ಮಾತು ಕೇಳಿಬಂದಿತ್ತು. ಅಲ್ಲಿ ಬ್ಲ್ಯಾಕ್ ಲಿಸ್ಟ್ ಮಾಡಿ ಕಳುಹಿಸಲಾಗಿದೆ. ರಾಜ್ಯದ 14 ಒಕ್ಕೂಟಗಳಲ್ಲೂ ಟ್ಯಾಂಕರ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ. ಮನ್‌ಮುಲ್ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಒತ್ತಡ ಇಲ್ಲ. ಸೂಪರ್‌ಸೀಡ್ ಒಂದೇ ಅಲ್ಲ, ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದರೆ ಅವರಿಗೂ ಶಿಕ್ಷೆಯಾಗಲಿದೆ. ಅಧಿಕಾರ ಕಸಿದುಕೊಳ್ಳುವುದು ನಮ್ಮ ಯೋಚನೆ ಅಲ್ಲ. ಶಾಶ್ವತ ಪರಿಹಾರ ಕೊಡುವುದರ ಬಗ್ಗೆ ಚಿಂತನೆ ನಡೆದಿದೆ. ಮುಂದೆ ಯಾರೊಬ್ಬರೂ ಈ ರೀತಿ ಮಾಡಬಾರದು ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss