ಉತ್ಪಾದನೆ ಆಧರಿತ ಉತ್ತೇಜನದ ಯೋಜನೆಯಡಿ 2.34 ಲಕ್ಷ ಕೋಟಿ ರುಪಾಯಿಗಳ ಹೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉತ್ಪಾದನೆ ಆಧಾರಿತ ಉತ್ತೇಜನ ಯೋಜನೆಯ ಅಡಿಯಲ್ಲಿ 14 ವಲಯಗಳಲ್ಲಿ ಒಟ್ಟೂ 2.34 ಲಕ್ಷ ಕೋಟಿ ರುಪಾಯಿಗಳ ಹೂಡಿಕೆ ಪಕ್ಕಾ ಆಗಿದೆ. ನಾನಾ ಸಚಿವಾಲಯಗಳು ಕಲೆಹಾಕಿರುವ ಮಾಹಿತಿ ಇದನ್ನು ದೃಢಪಡಿಸಿದೆ. ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ಬಂದ ಈ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರಕಿದೆ.

ಪ್ರಮುಖ ಕ್ಷೇತ್ರಗಳಾದ ಆಟೋಮೊಬೈಲ್‌, ವಾಹನ ಬಿಡಿಭಾಗಗಳ ತಯಾರಿಕೆ, ಸೆಲ್‌ ಬ್ಯಾಟರಿ ತಯಾರಿಕೆ, ಉಕ್ಕು ಮತ್ತು ಸೌರ ಫಲಕಗಳ ತಯಾರಿಕಾ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

“ಯೋಜನೆಯ ಒಟ್ಟೂ ವೆಚ್ಚವು 1.97 ಲಕ್ಷ ಕೋಟಿ ರುಪಾಯಿ ಗಳಾಗಿದ್ದು ಮುಂದಿನ ಐದು ವರ್ಷಗಳಲ್ಲಿ 28.15 ಲಕ್ಷ ಕೋಟಿ ಆದಾಯ ಗಳಿಸುವ ಮತ್ತು 6.45 ದಶಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ”ಎಂದು ಸರ್ಕಾರಿ ಮೂಲಗಳು ಹೇಳಿವೆ.

ಎರಡು ವರ್ಷಗಳ ಹಿಂದೆ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ತರಲಾಗಿತ್ತು. ಇದರ ಅಡಿಯಲ್ಲಿ ಎರಡರಿಂದ ಐದು ವರ್ಷದವರೆಗೆ ನಗದು
ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಭಾರತದಲ್ಲಿ ತಯಾರಾದ ಸರಕುಗಳ ಮಾರಾಟದ ಆಧಾರದ ಮೇಲೆ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ. ಜೊತೆಗೆ ಅವರು ಭಾರತದಲ್ಲಿ ನಿಗದಿತ ಕನಿಷ್ಠ ಪ್ರಮಾಣದಹೂಡಿಕೆಗೆ ಬದ್ಧರಾಗಿರಬೇಕಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!