ಭಾರತದಲ್ಲಿ ಐಪೋನ್‌ ತಯಾರಿ: ತಯಾರಕರ ಶ್ರೇಣಿ ಸೇರಲು ಟಾಟಾ ಪ್ರಯತ್ನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆಪಲ್‌ ತನ್ನ ಐಪೋನ್‌ ಉತ್ಪಾದನಾ ಘಟಕವನ್ನು ಭಾರತದಲ್ಲಿ ವಿಸ್ತರಿಸಲು ನೋಡುತ್ತಿರುವುದರ ಬೆನ್ನಲ್ಲೇ ತಯಾರಕರ ಶ್ರೇಣಿ ಸೇರಲು ಟಾಟಾ ಗ್ರುಪ್‌ ತಯಾರಿ ನಡೆಸುತ್ತಿದೆ. ವರದಿಗಳ ಪ್ರಕಾರ ಟಾಟಾ ಸಮೂಹವು ಆಪಲ್‌ಗೆ ಪೂರೈಕೆದಾರರಲ್ಲಿ ಒಂದಾಗಿರುವ ತೈವಾನ್‌ ಮೂಲದ ವಿಸ್ಟ್ರಾನ್ ಕಾರ್ಪ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಮಾತುಕತೆಗಳು ಒಪ್ಪಂದಕ್ಕೆ ಬಂದರೆ, ಟಾಟಾ ಗ್ರೂಪ್‌ನೊಂದಿಗೆ ವಿಸ್ಟ್ರಾನ್ ಕಾರ್ಪ್‌ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಜಂಟಿ ಉದ್ಯಮವನ್ನು ದೇಶದಲ್ಲಿ ಸ್ಥಾಪಿಸುತ್ತದೆ ಎನ್ನಲಾಗಿದೆ.

ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಟಾಟಾ ಗ್ರೂಪ್ ತನ್ನನ್ನು ತಂತ್ರಜ್ಞಾನ ತಯಾರಿಕೆಯಲ್ಲಿ ಪ್ರಮುಖ ಆಟಗಾರನಾಗಿ ಪರಿವರ್ತಿಸಲು ಉತ್ಪನ್ನ ಅಭಿವೃದ್ಧಿ, ಪೂರೈಕೆ ಸರಪಳಿ ಮತ್ತು ಜೋಡಣೆಯಲ್ಲಿ ವಿಸ್ಟ್ರಾನ್‌ನ ಪರಿಣತಿಯನ್ನು ಪಡೆಯಲು ಉತ್ಸುಕವಾಗಿದೆ.

ಮಾತುಕತೆಗಳು ರೂಪುಗೊಂಡರೆ ಮತ್ತು ಒಪ್ಪಂದವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದರೆ, ಟಾಟಾ ಗ್ರೂಪ್ ಆಪಲ್ ಐಫೋನ್‌ಗಳನ್ನು ತಯಾರಿಸುವ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಬಹುದು ಎನ್ನಲಾಗಿದೆ. ಅಲ್ಲದೇ ಯೋಜನೆಗಳು ಯಶಸ್ವಿಯಾದರೆ ಭಾರತದಲ್ಲಿ ವಿಸ್ಟ್ರಾನ್‌ನ ಕಾರ್ಯಾಚರಣೆಗಳಲ್ಲಿ ಈಕ್ವಿಟಿಗಳನ್ನು ಟಾಟಾ ಖರೀದಿಸುವ ಸಾಧ್ಯತೆಯಿದೆ. ಪರ್ಯಾಯವಾಗಿ, ಎರಡೂ ಕಂಪನಿಗಳು ದೇಶದಲ್ಲಿ ಅಸೆಂಬ್ಲಿ ಘಟಕವನ್ನು ಸಹ ನಿರ್ಮಿಸಬಹುದು.ಟಾಟಾಗಳು ಎರಡನ್ನೂ ಏಕಕಾಲದಲ್ಲಿ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ.

ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಮುಂದಿನ ದಿನಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಉತ್ಪಾದನೆಯು ಕಂಪನಿಯ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಾಗಿವೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯು ಪ್ರಸ್ತುತ ಬೆಳವಣಿಗೆಗೆ ಮತ್ತಷ್ಟು ಇಂಬು ನೀಡುತ್ತದೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!