ಕರ್ನಾಟಕದಲ್ಲೂ ತಯಾರಾಗಲಿದೆ ಐಫೋನ್:‌ ಫಾಕ್ಸ್‌ಕಾನ್‌ ಜೊತೆ ಒಪ್ಪಂದ, ಒಂದು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಅಡಚಣೆಗಳಿಂದಾಗಿ ಚೀನಾವನ್ನು ತೊರೆದಿರುವ ಟೆಕ್‌ದೈತ್ಯ ಆಪಲ್‌ ಭಾರತದಲ್ಲಿ ಅದಾಗಲೇ ಉತ್ಪಾದನೆ ಆರಂಭಿಸಿದ್ದು ತಮಿಳುನಾಡಿನ ಘಟಕದಲ್ಲಿ ವ್ಯಾಪಕವಾಗಿ ಐಫೋನ್‌ ಉತ್ಪಾದನೆ ನಡೆಯುತ್ತಿದೆ. ಇದೀಗ ಆಪಲ್‌ ಕರ್ನಾಟಕದಲ್ಲೂ ತನ್ನ ಉತ್ಪಾದನೆ ಆರಂಭಿಸಲಿದ್ದು ರಾಜ್ಯ ರಾಜಧಾನಿ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಉತ್ಪಾದನಾ ಘಟಕ ಆರಂಭಿಸುವ ಕುರಿತು ಕರ್ನಾಟಕ ಸರ್ಕಾರ ಹಾಗು ತೈವಾನ್‌ನ ಫಾಕ್ಸ್‌ಕಾನ್ ಸಂಸ್ಥೆಯ ನಡುವೆ ಒಪ್ಪಂದ ಏರ್ಪಟ್ಟಿದೆ.

ಇದರ ಅನ್ವಯ ಬೆಂಗಳೂರಿನ ಹೊರವಲಯದಲ್ಲಿ ಐಫೋನ್‌ಗಳ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್‌ಗೆ 300 ಎಕರೆ ಭೂಮಿ ಒದಗಿಸಲಾಗುತ್ತಿದ್ದು ದೊಡ್ಡ ಪ್ರಮಾಣದ ಉತ್ಪಾದನಾ ಸಾಮರ್ಥ್ಯದ ಘಟಕ ತಲೆ ಎತ್ತಲಿದೆ. ಬರೋಬ್ಬರಿ 700 ಮಿಲಿಯನ್‌ ಡಾಲರು ಗಳಷ್ಟು ಹೂಡಿಕೆಯಾಗಲಿದೆ. ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಡಬಲ್ ಇಂಜಿನ್ ಸರ್ಕಾರ ವನ್ನು ಶ್ಲಾಘಿಸಿದ್ದಾರೆ.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು “ಈ ಒಪ್ಪಂದವು ಕರ್ನಾಟಕಕ್ಕೆ ಸಂಪೂರ್ಣ ಅವಕಾಶಗಳನ್ನು ಸೃಷ್ಟಿಸುತ್ತದೆ” ಎಂದಿದ್ದಾರೆ, ಅಲ್ಲದೇ ಒಂದು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!