ಆರ್ಸಿಬಿ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಲಿದೆ ರಾಜಸ್ಥಾನ: ಆರ್‌ಆರ್ ಸಂಭಾವ್ಯ ಪ್ಲೇಯಿಂಗ್‌ XI ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಇಂದು (ಮೇ 27) ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್ 2022ರ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಕೆಲ ದಿನಗಳ ಹಿಂದೆ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ ಅಘಾತಕಾರಿ ಸೂಲು ಕಂಡಿರುವ ರಾಜಸ್ಥಾನ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್ಸಿಬಿ ತಂಡದೊಂದಿಗೆ ಮುಖಾಮುಖಿಯಾಗಲಿದೆ.
ಮತ್ತೊಂಡೆಡೆ ಆರ್ಸಿಬಿ ತಂಡ ಪ್ಲೇ ಆಫ್‌ ಪ್ರವೇಶಿಸುತ್ತಿದ್ದಂತೆ ಸಂಪೂರ್ಣ ಬಲಿಷ್ಠ ತಂಡವಾಗಿ ಗೋಚರಿಸುತ್ತಿದೆ. ರಜತ್‌ ಪಟೀದಾರ್‌ ಶತಕ ಸಿಡಿಸುವುದರೊಂದಿಗೆ ತಂಡದ ಬ್ಯಾಟಿಂಗ್‌ ವಿಭಾಗ ಅಪಾಯಕಾರಿಯಾಗಿ ಪರಿಣಮಿಸಿದೆ. ಆರ್ಸಿಬಿ ಬೌಲಿಂಗ್‌ ವಿಭಾಗ ಸಹ ಮತ್ತಷ್ಟು ಘಾತಕವಾಗಿ ಮಾರ್ಪಟ್ಟಿದೆ. ಎಲಿಮಿನೇಟರ್‌ ಪಂದ್ಯದಲ್ಲಿ ಲಕ್ನೋ ವಿರುದ್ಧ ಸೋಲಿನಂಚಿಗೆ ಜಾರುತ್ತಿದ್ದ ಪಂದ್ಯವನ್ನು ಬೌಲರ್‌ ಗಳು ಕೊನೆ ಓವರ್ ಗಳಲ್ಲಿ ಅದ್ಭುತ ದಾಳಿ ನಡೆಸಿ ಗೆಲ್ಲಿಸಿಕೊಟ್ಟಿದ್ದು ಇದಕ್ಕೆ ಸಾಕ್ಷಿಯಾಗಿದೆ.
ಎಲ್ಲಾ ವಿಭಾಗಗಳಲ್ಲೂ ಸದೃಢವಾಗಿ ತೋರುತ್ತಿರುವ ಆರ್ಸಿಬಿ ತಂಡವನ್ನು ಮಣಿಸಬೇಕಾದರೆ ಆರ್‌ ಆರ್‌ ತಂಡ ಸಂಪೂರ್ಣ ಸಾಮರ್ಥ್ಯದಿಂದ ಹೋರಾಡಬೇಕಿದೆ. ಆದ್ಧರಿಂದ ಕ್ವಾಲಿಫೈಯರ್‌ ಹಣಹಣಿ ಸಾಕಷ್ಟು ರೋಚಕವಾಗಿರುವುದಂತೂ ದಿಟ.

ಆರ್ಸಿಬಿ ವಿರುದ್ಧ ಆರ್‌ ಆರ್‌ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಹೀಗಿದೆ..
ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ರಿಂದ ಆರ್‌ ಆರ್‌ ಗೆ ಹೀಮದಿನ ಪಂದ್ಯಗಳಲ್ಲಿ ಉತ್ತಮ ಆರಂಭ ಸಿಕ್ಕಿದೆ. ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ವಿಫಲರಾದರೂ ಜೈಸ್ವಾಲ್‌ ಆರಂಭಿಕಾರಿ ಮುಂದುವರೆಯುವುದು ಖಚಿತ. ಇನ್ನು ಈಡೀ ಟೂರ್ನಿಯಲ್ಲಿ ಅಬ್ಬರಿಸಿ 700 ಕ್ಕಿಂತಲೂ ಹೆಚ್ಚಿನ ರನ್‌ ಕಲೆಹಾಕಿರುವ ಜೋಸ್‌ ಬಟ್ಲರ್‌ ರನ್ನು ಕಟ್ಟಿಹಾಕುವುದು ಆರ್ಸಿಬಿ ಪಾಳೆಯಕ್ಕೆ ತಲೆನೋವಾಗಿ ಪರಿಣಮಿಸಲಿದೆ. ಗುಜರಾತ್‌ ವಿರುದ್ಧ ಏಕಾಂಗಿ ಹೋರಾಟ ನಡೆಸಿದ್ದ ಬಟ್ಲರ್ 56 ಎಸೆತಗಳಲ್ಲಿ 89 ರನ್ ಸಿಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್ ಮತ್ತು ಶಿಮ್ರಾನ್ ಹೆಟ್ಮೆಯರ್ ಕಣಕ್ಕಿಳಿಯಲಿದ್ದು ಇವರಿಂದ ಸ್ಥಿರ ಪ್ರದರ್ಶನವನ್ನು ತಂಡ ಎದುರು ನೋಡುತ್ತಿದೆ.
ಕಳೆದ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ ಪ್ರಮುಖ 47 ರನ್ ಗಳಿಸಿ ಫಾರ್ಮ್‌ ಗೆ ಮರಳಿರುವ ಸೂಚನೆ ನೀಡಿದ್ದಾರೆ. ಶಿಮ್ರಾನ್ ಹೆಟ್ಮೆಯರ್ ರಾಯಲ್ಸ್‌ನ ಅತ್ಯಂತ ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. ಪಡಿಕ್ಕಲ್‌ ರಿಂದ ಖ್ಯಾತಿಗೆ ತಕ್ಕ ಪ್ರದರ್ಶನ ಬಂದಿಲ್ಲ.‌ ಕೆಳ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಲ್ ರೌಂಡರ್‌ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರಿಯಾನ್ ಪರಾಗ್ ಮೇಲೆ ತಂಡ ನಂಬಿಕೆ ಇಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ ನಲ್ಲಿ ಮಿಂಚು ಹರಿಸುತ್ತಿರುವ ಅಶ್ವಿನ್‌ ದಿಢೀರ್‌ ಕುಸಿಯುತ್ತಿರುವ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗುತ್ತಿದ್ದಾರೆ. ತಂಡದ ಪ್ರಮುಖ ಬ್ಯಾಟರ್‌ ಗಳು ವಿಫಲವಾದರೂ ಅಬ್ಬರಿಸುತ್ತಿರುವ ಅಶ್ವಿನ್‌ ರನ್ನು ಕಟ್ಟಿಹಾಕಲು ವಿಶೇಷ ಯೋಜನೆ ರೂಪಿಸುವ ಸವಾಲು ಆರ್ಸಿಬಿ ಬೌಲರ್‌ ಗಳ ಮುಂದಿರಲಿದೆ.
ತಂಡದ ಬೌಲಿಂಗ್‌ ವಿಭಾಗ ಸಮತೋಲನದಿಂದ ಕೂಡಿದೆ. ವೇಗಿಗಳಾದ ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಒಬೆದ್ ಮೆಕಾಯ್ ಹಾಗೂ ಸ್ಪಿನ್ನರ್‌ ಗಳಾದ ಯುಜ್ವೇಂದ್ರ ಚಾಹಲ್ ಹಾಗೂ ಅಶ್ವಿನ್‌ ಅವರಿರುವ ಬೌಲಿಂಗ್‌ ವಿಭಾಗ ಈ ವರೆಗೂ ಉತ್ತಮ ಪ್ರದರ್ಶನ ನೀಡಿದೆ.
ಲೆಗ್‌ ಸ್ಪಿನ್ನರ್ ಚಾಹಲ್ 15 ಪಂದ್ಯಗಳಿಂದ 26 ವಿಕೆಟ್‌ಗಳಿಸಿ ಪರ್ಪಲ್ ಕ್ಯಾಪ್ ಸರದಾರ ಎನಿಸಿಕೊಂಡಿದ್ದಾರೆ. ನಾಕೌಟ್ ಮುಖಾಮುಖಿಯಲ್ಲಿ ವಿಶ್ವ ದರ್ಜೆಯ ಆರ್ಸಿಬಿ ಬ್ಯಾಟಿಂಗ್ ಲೈನ್-ಅಪ್ ಎದುರಿಸುವ ಸವಾಲು ಚಾಹಲ್‌ ಮುಂದಿದ್ದು , ʼಮಾಜಿ ತಂಡʼದ ವಿರುದ್ಧ ಚಾಹಲ್‌ ಪ್ರದರ್ಶನ ಹೇಗಿರಲಿದೆ ಕಾದುನೋಡಬೇಕಿದೆ.

 ಆರ್‌ಆರ್‌ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಸಿ & ವಿಕೆ), ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಒಬೆದ್ ಮೆಕಾಯ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!