ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 15 ನೇ ಆವತ್ತಿ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿ ಟೂರ್ನಿಯಲ್ಲಿ ಹತ್ತು ತಂಡಗಳು ಭಾಗಿಯಾಗುತ್ತಿದ್ದು, ಗ್ರೂಪ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ.
ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ಕಪ್ ಗೆಲ್ಲಲು ಅಗತ್ಯ ಸಿದ್ಥತೆಗಳನ್ನು ನಡೆಸುತ್ತಿವೆ. ಐಪಿಎಲ್ ಮೊದಲ ಆವೃತ್ತಿಯ ಚಾಂಪಿಯನ್ ತಂಡವಾದ ರಾಜಸ್ಥಾನ್ ರಾಯಲ್ಸ್ ( ಆರ್ ಆರ್) ಸಹ ಟೂರ್ನಿಗೆ ಸಿದ್ಧತೆಗಳಲ್ಲಿ ತೊಡಗಿದ್ದು, ತಂಡದ ಫೇಸ್ ಬೌಲಿಂಗ್ ಕೋಚ್ ಆಗಿ ಸ್ಟೀಫನ್ ಜೋನ್ಸ್ ಅವರನ್ನು ನೇಮಿಸಿದೆ. 48 ವರ್ಷದ ಜೋನ್ಸ್ ಅವರು ಇಂಗ್ಲೆಂಡ್‌ನ ಹಲವಾರು ಕೌಂಟಿ ತಂಡಗಳಿಗೆ ಆಟವಾಡಿರುವ ಅನುಭವ ಹೊಂದಿದ್ದು, ಜೊತೆಗೆ ಬೌಲಿಂಗ್ ಕೋಚ್ ಆಗಿಯೂ ವಿವಿಧ ಟೂರ್ನಿಗಳಲ್ಲಿ ಯಶಸ್ಸು ಕಂಡಿದ್ದಾರೆ.
ಮಾ. 7 ರಿಂದ 10 ರವರೆಗೆ ನಾಗ್ಪುರದಲ್ಲಿ ಆಯೋಜಿಸಿರುವ ರಾಯಲ್ಸ್ ತರಬೇತಿ ಶಿಬಿರದಲ್ಲಿ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ. ರಾಯಲ್ಸ್ ತಂಡದ ಹರಾಜಿನಲ್ಲಿ ಖರೀದಿಸಿರುವ ಟ್ರೆಂಟ್ ಬೋಲ್ಟ್, ಕರ್ನಾಟಕದ ಪ್ರಸಿಧ್ ಕೃಷ್ಣ ಮೊದಲಾದ ವೇಗಿಗಳಿಗೆ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ